Select Your Language

Notifications

webdunia
webdunia
webdunia
webdunia

ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ತಪೋಪಿಗೆ

ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ತಪೋಪಿಗೆ
ಬೆಂಗಳೂರು , ಶುಕ್ರವಾರ, 8 ಜುಲೈ 2022 (14:06 IST)

ಕೊಲೆಯಾದ ಶ್ರೀನಗರ ಕ್ರಾಸ್ ಬಳಿಯ ಹೊಟೇಲ್ ಎಡಿಜಿಪಿ ಅಲೋಕುಮಾರ ಭೇಟಿ ನೀಡಿದರೆ ಅದೇ ಹೊಟೇಲ್ ಗೆ ಕೊಲೆ ಆರೋಪಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಯಿತು.

ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ಮೂರು ದಿನ ಕಳೆಯುತ್ತಿದೆ. ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು, ಆರು ದಿನದ ಕಸ್ಟಡಿಯಲ್ಲಿ ಮೊದಲ ದಿನವೇ ಮಹತ್ವದ ಅಂಶಗಳನ್ನು ಬಾಯಿಬಿಡಿಸಿದ್ದಾರೆ. ಮೊದಲ ದಿನವೇ ಹತ್ಯೆಯನ್ನು ಒಪ್ಪಿಕೊಂಡಿರುವ ಹಂತಕರು ಕುತೂಹಲಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು ಇನ್ನೊಂದು ಕಡೆ ಗುರುಜಿ ಹಂತಕರನ್ನ ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಇಂಚಿಂಚು ಮಾಹಿತಿ ಕಲೆಹಾಕಿದರು.

ಆರೋಪಿಗಳಿಬ್ಬರು ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ದೇವೆ, 2016ರಲ್ಲೇ ಕೆಲಸ ಬಿಟ್ಟಿದ್ದೇವೆ.ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು.ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ.ಆದ್ರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಸಹ ನಮ್ಮನ್ನ ಬಿಡಲಿಲ್ಲ.ಅಷ್ಟೊಂದು ಕಿರುಕುಳ ನಮಗೆ ಗುರೂಜಿ ನೀಡುತ್ತಿದ್ದರು.

ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ.ನಾವು ಎಲ್ಲೇ ಯಾವುದೇ ಬಿಜಿನೆಸ್ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು.ಒಂದಿಲ್ಲೊಂದು ಸಮಸ್ಯೆಯನ್ನ ನಮಗೆ ಚಂದ್ರಶೇಖರ ಗುರೂಜಿ ತಂದಿಡುತ್ತಿದ್ದರು.ಬೇರೆ ಬೇರೆ ಊರುಗಳಲ್ಲಿ ಬಿಜಿನೆಸ್ ಮಾಡಿದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ.ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆಂದು ತಪ್ಪೊಪ್ಪಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಸಂವಹನ ವಿಭಾಗಕ್ಕೆ ಪ್ರಿಯಾಂಕ್‌ ಖರ್ಗೆ ನೇಮಕ