ತಿಂಗಳಲ್ಲೇ ಪ್ರಿಯಕರ ಜೊತೆ ಸೇರಿ ಪತಿಯನ್ನೇ ಕೊಂದಳು!

Webdunia
ಬುಧವಾರ, 11 ಮೇ 2022 (13:17 IST)
ಹೈದರಾಬಾದ್ : ಮದುವೆಯಾದ ಕೇವಲ 36 ದಿನಗಳಲ್ಲಿಯೇ ಮಹಿಳೆಯೊಬ್ಬಳು ನಂತರ ತನ್ನ ಪ್ರಿಯಕರ, ಆತನ ನಾಲ್ವರು ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸೇರಿ ಪತಿಯನ್ನು ಕೊಂದಿದ್ದಾಳೆ.
 
ಏಪ್ರಿಲ್ 28 ರಂದು ತೆಲಂಗಾಣದ ಸಿದ್ದಿಪೇಟ್ನಲ್ಲಿ ಈ ಭಯಾನಕ ಘಟನೆ ಸಂಭವಿಸಿದ್ದು, 10 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಮುನ್ನ ಆರೋಪಿ ಮಹಿಳೆ, ತನ್ನ ಪತಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಳು.

ಆದರೆ ಮೃತ ವ್ಯಕ್ತಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ವಿಚಾರಣೆ ನಡೆಸುವಾಗ ಮಹಿಳೆಯೇ ಕೊಲೆ ಮಾಡಿರುವುದು ಸಾಬೀತಾಗಿದೆ.

ಮೃತನನ್ನು ಕೆ. ಚಂದ್ರಶೇಖರ್(28) ಎಂದು ಗುರುತಿಸಲಾಗಿದ್ದು, 19 ವರ್ಷದ ಶ್ಯಾಮಲಾ, 20 ವರ್ಷದ ತನ್ನ ಪ್ರಿಯಕರ ಶಿವ ಕುಮಾರ್ ಜೊತೆ ಸೇರಿ ಪತಿ ಚಂದ್ರಶೇಖರ್ ಕತ್ತು ಹಿಸುಕಿ ಕೊಂದಿದ್ದಾಳೆ. ಮೊದಲು ವಿಷ ಹಾಕಿ ಗಂಡನನ್ನು ಕೊಲ್ಲಲು ಯತ್ನಿಸಿ ವಿಫಲವಾದ ಬಳಿಕ, ಪ್ರಿಯಕರ ಶಿವ, ಆತನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಸೇರಿ ಹತ್ಯೆಗೆ ಪ್ಲಾನ್ ಮಾಡಿದ್ದಾಳೆ. 

ಶ್ಯಾಮಲಾ ಕಳೆದ ಮೂರು ವರ್ಷಗಳಿಂದ ಶಿವನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯವರ ಒತ್ತಡದಿಂದ ಮಾರ್ಚ್ 23 ರಂದು ಚಂದ್ರಶೇಖರ್ ಅವರನ್ನು ವಿವಾಹವಾಗಿದ್ದಳು. ಮದುವೆಯ ನಂತರವೂ ಪ್ರಿಯಕರ ಶಿವ ಜೊತೆಗೆ ಸಂಬಂಧವನ್ನು ಮುಂದುವರೆಸಿದಳು.

ತದನಂತರ ಪ್ರಿಯಕರನೊಂದಿಗೆ ಹೊಸ ಸಂಚು ರೂಪಿಸಿ, ಅದರಂತೆ ಏಪ್ರಿಲ್ 19 ರಂದು ಚಂದ್ರಶೇಖರ್ಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಅನಂತಸಾಗರ ಗ್ರಾಮದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವನ್ನು ತಲುಪಿದಾಗ, ಶಿವ ತನ್ನ ಸ್ನೇಹಿತರಾದ ರಾಕೇಶ್, ರಂಜಿತ್ ಮತ್ತು ಆತನ ಇಬ್ಬರು ಸಂಬಂಧಿಕರಾದ ಸಾಯಿಕೃಷ್ಣ ಮತ್ತು ಭಾರ್ಗವ್ ಅವರೊಂದಿಗೆ ದ್ವಿಚಕ್ರ ವಾಹನದಿಂದ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ಬಳಿಕ ಶ್ಯಾಮಲಾ, ಶಿವ ಇಬ್ಬರು ಸೇರಿ ಕತ್ತು ಚಂದ್ರಶೇಖರ್ ಕತ್ತು ಹಿಸುಕಿ ಹತ್ಯೆಗೈದು, ಎದೆನೋವು ಕಾಣಿಸಿಕೊಂಡು ಚಂದ್ರಶೇಖರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿದ್ದಾಳೆ. ಆದರೆ ಈ ಬಗ್ಗೆ ಅನುಮಾನಗೊಂಡ ಮೃತನ ತಾಯಿ ಶ್ಯಾಮಲಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊನೆಗೆ ತನಿಖೆ ವೇಳೆ ಪೊಲೀಸರ ಬಳಿ ಆರೋಪಿ ಮಹಿಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಇದೀಗ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿದ್ದಿಪೇಟೆ ಎರಡರ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ತೀರ್ಮಾನ: ಶಾಕ್ ಕೊಟ್ಟ ಸಿದ್ದು

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಮಾತ್ರ ಇಂದು ಭಾರೀ ಮಳೆ

ನನ್ನ ಅಕ್ಕನನ್ನು ಮಾರಾಟ ಮಾಡ್ಬೇಡಿ, ಅಕ್ಕನ ಮಾತು ಕೇಳಿದ್ರೆ ಕಣ್ಣೀರು ಬರುತ್ತೆ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments