Publish Date: Sat, 17 Mar 2018 (09:32 IST)
Updated Date: Sat, 17 Mar 2018 (09:34 IST)
ಹೈದರಾಬಾದ್: ಟಿಡಿಪಿ ಜತೆ ಮೈತ್ರಿ ಕಳೆದುಕೊಂಡು ಬರಿದಾಗಿರುವ ಬಿಜೆಪಿ ಸಹಾಯಕ್ಕೆ ಪವನ್ ಕಲ್ಯಾಣ್ ಬರುತ್ತಾರಾ? ಈ ಬಗ್ಗೆ ಮಾಧ್ಯಮಗಳಿಗೆ ನಟ, ಜನ ಸೇನಾ ಪಕ್ಷದ ನೇತಾರ ಪವನ್ ಕಲ್ಯಾಣ್ ಉತ್ತರಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಪವನ್ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆದರೆ ಇತ್ತೀಚೆಗೆ ಅವರಿಗೆ ಬಿಜೆಪಿ ಮೇಲೆ ಒಲವಿಲ್ಲ. ಮೊನ್ನೆಯಷ್ಟೇ ಕೇಂದ್ರದ ಮೇಲೆ ಹರಿಹಾಯ್ದಿದ್ದರು.
ಹೀಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಬಿಲ್ ಕುಲ್ ಇಲ್ಲ ಎಂದಿದ್ದಾರೆ. ‘ಬಿಜೆಪಿ ಬಗ್ಗೆ ಇದೀಗ ಆಂಧ್ರದಲ್ಲಿ ನೆಗೆಟಿವ್ ಇಮೇಜ್ ಇದೆ. ಈ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದೀಗ ಇಲ್ಲಿನ ಯಾವ ಪಕ್ಷವೂ ಇಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ ಕೇಂದ್ರದ ಮೇಲೆ ಎಲ್ಲಾ ಪಕ್ಷಗಳೂ ಗರಂ ಆಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ