Select Your Language

Notifications

webdunia
webdunia
webdunia
webdunia

ಟ್ವಿಟರ್ ಮೂಲಕ ಗಳಿಸಬಹುದಾಗಿದ್ದ ಗೌರವವನ್ನು ಟ್ವಿಟರ್ ನಿಂದಲೇ ಕಳೆದುಕೊಂಡ ಬಿಜೆಪಿ

ಬಿಎಸ್ ಯಡಿಯೂರಪ್ಪ
ಬೆಂಗಳೂರು , ಶನಿವಾರ, 17 ಮಾರ್ಚ್ 2018 (08:58 IST)
ಬೆಂಗಳೂರು: ನಿನ್ನೆ ಇಡೀ ದಿನ ವೀರಪ್ಪ ಮೊಯಿಲಿ ತಮ್ಮದೇ ಪಕ್ಷಕ್ಕೆ ಮುಜುಗರಾಗುವಂತೆ ಟ್ವೀಟ್ ಮಾಡಿದ್ದು ಬಿಜೆಪಿಗೆ ಅಸ್ತ್ರವಾಗಿತ್ತು. ಇದು ಕಾಂಗ್ರೆಸ್ ಗೆ ದೊಡ್ಡ ನಷ್ಟವಾಗಿತ್ತು.

ಆದರೆ ಇದೇ ಟ್ವೀಟ್ ಮೂಲಕ ಬಿಜೆಪಿ ಅದರಲ್ಲೂ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಟ್ವೀಟ್ ನಿಂದಾಗಿ ಗಳಿಸಿಕೊಂಡಿದ್ದನ್ನು ಬಿಜೆಪಿ ಕಳೆದುಕೊಂಡಿತು.

ಮೊನ್ನೆ ಬಿಎಸ್ ವೈ ತಮ್ಮ ಟ್ವಿಟರ್ ಖಾತೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಬರೆದುಕೊಂಡಿದ್ದರು. ಆದರೆ ಹೇಳಿದ ಸಮಯಕ್ಕೆ ಟ್ವಿಟರ್ ನಲ್ಲಿ ಬ್ರೇಕಿಂಗ್ ನ್ಯೂಸ್ ಕೊಡದ ಬಿಎಸ್ ವೈ ನಗೆಪಾಟಲಿಗೀಡಾದರು. ಅಷ್ಟು ಹೊತ್ತು ಮೊಯಿಲಿ ಟ್ವೀಟ್ ಪ್ರಮಾದದ ಬಗ್ಗೆ ಟೀಕಿಸುತ್ತಿದ್ದ ಜನರು ಬಿಎಸ್  ವೈ ಟ್ವೀಟ್ ಬಗ್ಗೆ ಲೇವಡಿ ಮಾಡುವಂತಾಯಿತು. ಇದರೊಂದಿಗೆ ಬಿಎಸ್ ವೈ ಟ್ವೀಟ್ ಠುಸ್ ಪಟಾಕಿಯಾಯಿತು.

ಅಷ್ಟೇ ಅಲ್ಲ, ಕಾಂಗ್ರೆಸ್ ಟ್ವೀಟ್ ಮೇಲಿದ್ದ ಜನರ ಗಮನ ಬಿಎಸ್ ವೈ ಠುಸ್ ಪಟಾಕಿಯತ್ತ ಸರಿಯಿತು. ಇದರಿಂದಾಗಿ ವೀರಪ್ಪ ಮೊಯಿಲಿ ಟ್ವೀಟ್ ಪ್ರಮಾದವನ್ನೇ ಬಳಸಿಕೊಂಡು ಕಾಂಗ್ರೆಸ್ ಕಾಲೆಳೆಯುವ, ಜನರಲ್ಲಿ ಕಾಂಗ್ರೆಸ್ ಬಗ್ಗೆ ಮತ್ತಷ್ಟು ಕಾಲೆಳೆಯಲು ಸಿಕ್ಕ ಅವಕಾಶ ಕಳೆದುಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ಎಂ.ರೇವಣ್ಣ ವಿರುದ್ಧ ಎಸಿಬಿಗೆ ದೂರು ನೀಡಿದ್ದು ಯಾಕೆ?