Publish Date: Fri, 16 Mar 2018 (12:50 IST)
Updated Date: Fri, 16 Mar 2018 (12:52 IST)
ಬೆಂಗಳೂರು: ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಹಣ ವ್ಯವಹಾರ ನಡೆಯುತ್ತಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿ ವಿವಾದಕ್ಕೀಡಾದ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯಿಲಿ ಪರ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದಾರೆ.
ವೀರಪ್ಪ ಮೊಯಿಲಿ ತಮ್ಮ ಹೇಳಿಕೆಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅವರು ಟ್ವೀಟ್ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದಿಂದ ಪರಿಶೀಲನೆಯಾಗಲಿದೆ. ಯಾರಿಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಅಷ್ಟೇ ಅಲ್ಲ ಟ್ವೀಟ್ ಮಾಡಿರುವ ಮೊಯಿಲಿ ಪರ ಬ್ಯಾಟಿಂಗ್ ಮಾಡಿರುವ ಪರಮೇಶ್ವರ್, ಮೊಯಿಲಿ ಹೀಗೆಲ್ಲಾ ಮಾತನಾಡಿರುವ ಸಾಧ್ಯತೆಯಿಲ್ಲ. ಬಿಜೆಪಿ ನಾಯಕರದ್ದು ಈ ವಿಚಾರದಲ್ಲಿ ಅಸಂಬದ್ಧ ಹೇಳಿಕೆ. ಒಂದು ವೇಳೆ ಕಮಿಷನ್ ತೆಗೆದುಕೊಳ್ಳುತ್ತೆ ಎಂದರೆ ದಾಖಲೆ ಕೊಡಲಿ. ಇದರಲ್ಲಿ ಬಿಜೆಪಿಯವರದ್ದೇ ಕೈವಾಡವಿರುವಂತೆ ತೋರುತ್ತಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ