Publish Date: Fri, 16 Mar 2018 (10:21 IST)
Updated Date: Fri, 16 Mar 2018 (10:22 IST)
ಬೆಂಗಳೂರು: ವೀರಪ್ಪ ಮೊಯಿಲಿ ಟ್ವಿಟರ್ ನಲ್ಲಿ ಹಾಕಿರುವ ಬಾಂಬ್ ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಮೂಡಿಸಿದೆ. ವೀರಪ್ಪ ಮೊಯಿಲಿ ಯಾವ ಉದ್ದೇಶಕ್ಕೆ ಬರೆದುಕೊಂಡರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರಿಗೆ ಟೀಕಾಸ್ತ್ರ ಸಿಕ್ಕಿದೆ.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ ಟ್ವೀಟ್ ಮಾಡಿದ್ದು ಮೊಯಿಲಿ ಹೇಳಿದ್ದು ಸರಿಯಾಗಿಯೇ ಇದೆ. ಕಾಂಗ್ರೆಸ್ ನಲ್ಲಿ ಹಣದ ಸಂಸ್ಕೃತಿ ಎಂಬುದಕ್ಕೆ ಮೊಯಿಲಿ ಟ್ವೀಟ್ ಉದಾಹರಣೆ. ಸಿಎಂ ಸಿದ್ದರಾಮಯ್ಯ ಅನೈತಿಕವಾಗಿ ವರ್ತಿಸುತ್ತಾರೆ. ಆಡಳಿತದ ಎಲ್ಲಾ ವರ್ಗದಲ್ಲೂ ಅನೈತಿಕತೆ ನಡೆಯುತ್ತಿದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ಮೊಯಿಲಿ ತಮ್ಮ ಟ್ವೀಟ್ ನಲ್ಲಿ ರಾಜಕೀಯದಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತಿದೆ. ಲೋಕೋಪಯೋಗಿ ಸಚಿವರೊಂದಿಗೆ ಗುತ್ತಿಗೆದಾರರ ಸಂಬಂಧ ಹೆಚ್ಚಾಗುತ್ತಿದೆ. ನಮಗೆ ಗುತ್ತಿಗೆದಾರರು ಬೇಕಾಗಿಲ್ಲ ಎಂದು ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ