Select Your Language

Notifications

webdunia
webdunia
webdunia
webdunia

ಪ್ರಿಯಕರನ ಜತೆ ಓಡಿಹೋದ ಪತ್ನಿ: ಪತಿ ಮಾಡಿದ್ದೇನು ಗೊತ್ತಾ?

Illicit relationship
mumbai , ಗುರುವಾರ, 30 ನವೆಂಬರ್ 2023 (12:55 IST)
38 ವರ್ಷ ವಯಸ್ಸಿನ ಚಾಲಕ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಆದರೆ ನೇಣು ಹಾಕಿಕೊಳ್ಳುವ ಮುಂಚೆ ಅವನು ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ. ವಿಡಿಯೋ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಇದೊಂದು ಆತ್ಮಹತ್ಯೆಯ ವಿಶಿಷ್ಠ ಪ್ರಸಂಗವೆನಿಸಿಕೊಂಡಿದೆ. ಪತ್ನಿಯು ಪ್ರಿಯಕರನ ಜತೆ ಓಡಿಹೋದ ಕಾರಣಕ್ಕಾಗಿ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಚಾಲಕ ಆತ್ಮಹತ್ಯೆಗೆ ಮುಂಚೆ ರೆಡಿಮಾಡಿಟ್ಟ ವಿಡಿಯೋದಿಂದ ಪತ್ನಿ, ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
 
ಆ ವಿಡಿಯೋದಲ್ಲಿ ತನ್ನ ಪತ್ನಿ, ಅವಳ ಪ್ರಿಯಕರ ಮತ್ತು ಪೊಲೀಸರೊಬ್ಬರು ನನ್ನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ದೂರಿದ್ದಾನೆ. ಮಧ್ಯಮುಂಬೈನ ಅಗ್ರಿಪಾದಾದ ಗುಡಿಸಿಲಿನಲ್ಲಿ ಚಾಲಕನು ನೇಣು ಹಾಕಿಕೊಂಡು ಸತ್ತಿದ್ದನ್ನು ಚಾಲಕನ ತಾಯಿ ನೋಡಿದರು. ಮರಾಠಿಯಲ್ಲಿ ಒಂದು ಪತ್ರವೊಂದನ್ನು ಚಾಲಕ ಬರೆದಿಟ್ಟು, ವಿಡಿಯೋ ಚೆಕ್ ಮಾಡುವಂತೆ ತಿಳಿಸಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ