Select Your Language

Notifications

webdunia
webdunia
webdunia
webdunia

ಪ್ರೀತಿಸಿ, ವಿವಾಹವಾಗಲು ನಿರಾಕರಿಸಿದ ಯುವಕನಿಗೆ ಯುವತಿ ಮಾಡಿದ್ದೇನು ಗೊತ್ತಾ?

ಪ್ರೀತಿಸಿ, ವಿವಾಹವಾಗಲು ನಿರಾಕರಿಸಿದ ಯುವಕನಿಗೆ ಯುವತಿ ಮಾಡಿದ್ದೇನು ಗೊತ್ತಾ?
lucknow , ಗುರುವಾರ, 30 ನವೆಂಬರ್ 2023 (08:15 IST)
ಮದುವೆಯಾಗಲು ನಿರಾಕರಿಸಿದ ದಿನದಿಂದ ಕೋಪದ ಸಮುದ್ರದಲ್ಲಿ ಲಾವಾರಸದಂತೆ ಕುದಿಯುತ್ತಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಮೇಲೆ ಆಸಿಡ್ ಎರಚಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾಳೆ.
 
ಪ್ರೀತಿಯನ್ನು ತಿರಸ್ಕರಿಸಿದ್ದಕ್ಕಾಗಿ ಪ್ರಿಯತಮೆಯ ಮೇಲೆ ಆಸಿಡ್ ಎರಚಿರುವ ಹಲವಾರು ಘಟನೆಗಳನ್ನು ಕೇಳಿದ್ದೇವೆ. ಇದೀಗ ಮೊದಲ ಬಾರಿಗೆ ವಿವಾಹವಾಗಲು ನಿರಾಕರಿಸಿದ ಪ್ರಿಯತಮನ ಮೇಲೆ ಪ್ರಿಯತಮೆಯೊಬ್ಬಳು ಆಸಿಡ್ ಎರಚಿದ ಘಟನೆ ವರದಿಯಾಗಿದೆ.
 
ಪ್ರಿಯಕರ ಧರ್ಮೇಂದ್ರ ಆಸಿಡ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣದ ಹೋರಾಟದಲ್ಲಿದ್ದಾನೆ. ಇದೀಗ ಲಕ್ನೋ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಆಸಿಡ್ ಎರಚಿದ ಯುವತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೂಡ ಕೋಟಿ ವಂದನೆ ಡಿಸಿಎಂ ಡಿಕೆಶಿವಕುಮಾರ್