Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ

wife
chandighad , ಗುರುವಾರ, 30 ನವೆಂಬರ್ 2023 (11:25 IST)
ಅನೈತಿಕ ಸಂಬಂಧವನ್ನು ಬಿಟ್ಟು ಬಿಡು ಅದು ಸರಿಯಲ್ಲ ಎಂದು ಪತಿ ಹೇಳಿದ್ದಕ್ಕೆ ಕೆಂಡಾಮಂಡಲವಾದ ಪತ್ನಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ
 
ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ಹತ್ಯೆ ಎಸಗಿದ 45 ವರ್ಷ ವಯಸ್ಸಿನ ಮಹಿಳೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
 
ಆರೋಪಿ ಮಹಿಳೆ ಗುಡ್ಡಿ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬಿಜೇಂದರ್ ಸಿಂಗ್ ಎಂಬಾತನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ಹಲವು ಬಾರಿ ಪತ್ನಿಗೆ ಬುದ್ದಿ ಮಾತು ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ.ತನ್ನ ಚಾಳಿಯನ್ನು ಮುಂದುವರಿಸಿದ್ದಳು.
 
ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿರುವುದನ್ನು ಸಹಿಸದ ಪತ್ನಿ ಗುಡ್ಡಿ, ಆಯುರ್ವೇದಿಕ ಚಿಕಿತ್ಸಾಲಯ ನಡೆಸುತ್ತಿದ್ದ ತನ್ನ ಪತಿಯನ್ನು ರಾತ್ರಿ ಮಲಗಿದ್ದಾಗ ಹತ್ಯೆಗೈದಿದ್ದಳು. ಏತನ್ಮಧ್ಯೆ, ಪ್ರಿಯಕರ ಬಿಜೇಂದರ್ ಸಿಂಗ್‌ನನ್ನು ಆರೋಪಗಳಿಂದ ಮುಕ್ತವಾಗಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ: ಗೆಳೆಯನಿಗೆ ನೋ ಎಂದಿದ್ದಕ್ಕೆ ಜೀವ ಕಳೆದುಕೊಂಡ ಮಹಿಳೆ