Publish Date: Fri, 04 Sep 2020 (21:31 IST)
Updated Date: Fri, 04 Sep 2020 (21:33 IST)
ತಾನು ಕೈ ಹಿಡಿದ ಪತ್ನಿ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿರುವುದನ್ನು ಸಹಿಸಲಾರದ ಗಂಡ ಮಾಡಬಾರದ್ದನ್ನು ಮಾಡಿಕೊಂಡಿದ್ದಾನೆ.
ತನ್ನ ಮಗಳನ್ನು ಕೊಲೆ ಮಾಡಿ, ಗಂಡ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಖಾಸಗಿ ಕೆಲಸ ಮಾಡುತ್ತಿದ್ದ ಗಣೇಶ್ ತನ್ನ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸ್ನೇಹಿತರ ಮೊಬೈಲ್ ಗೆ ಕಳಿಸಿದ್ದಾನೆ.
ಆಂಧ್ರಪ್ರದೇಶದ ಚಿತ್ತೂರುದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.