Publish Date: Mon, 13 Aug 2018 (14:52 IST)
Updated Date: Mon, 13 Aug 2018 (14:55 IST)
ಹೈದರಾಬಾದ್ : ಬಿಜೆಪಿ ಗೋ ರಕ್ಷಣೆಗೆ ಯಾವುದೇ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿ ತೆಲಂಗಾಣ ಬಿಜೆಪಿ ಶಾಸಕರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜಕೀಯ ಸ್ಥಾನಮಾನಕ್ಕಿಂತ ಮಿಗಿಲಾದದ್ದು ಬೇರೆ ಇಲ್ಲ ಎಂದುಕೊಂಡಿರುವ ನಾಯಕರಿರುವ ಈ ಕಾಲದಲ್ಲಿ ಇದೀಗ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಲೋಧ್ ಅವರು ನನಗೆ ಹಿಂದು ಧರ್ಮ ಮತ್ತು ಗೋ ರಕ್ಷಣೆ ಮೊದಲ ಆದ್ಯತೆ. ರಾಜಕೀಯ ನಂತರ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
‘’ಗೋ ರಕ್ಷಣೆಗಾಗಿ ನಾನು ಬಿಜೆಪಿಯನ್ನು ತೊರೆದಿದ್ದೇನೆ. ನಾನು ವಿಧಾನಸಭೆಯಲ್ಲೂ ಈ ಬಗ್ಗೆ ಹಲವು ಬಾರಿ ಧ್ವನಿ ಎತ್ತಿದ್ದೇನೆ. ಆದರೆ ನಮ್ಮ ಪಕ್ಷ ನನಗೆ ಈ ಕುರಿತು ಯಾವುದೇ ಬೆಂಬಲ ನೀಡಿಲ್ಲ. ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಗೋಶಮಹಲ್ ಕ್ಷೇತ್ರದ ಶಾಸಕ ರಾಜಾ ಸಿಂಗ್ ಲೋಧ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ