Webdunia - Bharat's app for daily news and videos

Install App

ಸೇಡು ತೀರಿಸಿಕೊಳ್ಳಲು ಹಾವಿನ ತಲೆಯನ್ನು ಕಚ್ಚಿ ತಿಂದ ಭೂಪ

ಅತಿಥಾ
ಮಂಗಳವಾರ, 20 ಫೆಬ್ರವರಿ 2018 (17:27 IST)
ವ್ಯಕ್ತಿಯೊಬ್ಬ ಸೇಡು ತೀರಿಸಿಕೊಳ್ಳಲು ಹಾವಿನ ತಲೆಯನ್ನು ಕಚ್ಚಿ ಅದನ್ನು ಉಗುಳುವ ಮೊದಲು ಅಗಿದು ತಿಂದಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದ ಹಾರ್ದೊಯಲ್ಲಿ ಶನಿವಾರ ನಡೆದಿದೆ. ಆ ಹಾವು ಅವನನ್ನು ಒಮ್ಮೆ ಕಚ್ಚಿರುವುದರಿಂದ ಈತ ಆ ಹಾವನ್ನೇ ಕಚ್ಚಿ ತಿಂದಿದ್ದಾನೆ. ಹಾವನ್ನು ಕಚ್ಚಿ ತಿಂದ ಈತ ಪ್ರಜ್ಞೆ ಕಳೆದುಕೊಂಡ ನಂತರ ಸ್ಥಳಿಯರು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಸೋನೆಲಾಲ್ ಎಂಬ ಈ ವ್ಯಕ್ತಿಯು ತನ್ನ ಜಾನುವಾರುಗಳನ್ನು ಮೇಯಿಸುತ್ತಿರುವಾಗ ಈ ಹಾವು ತನಗೆ ಕಚ್ಚಿತ್ತು, ಅದೇ ಸೇಡು ತೀರಿಸಿಕೊಳ್ಳು ನಾನು ಅದನ್ನು ಕಚ್ಚಿ ತಿಂದಿದ್ದೇನೆ ಎಂದು ಹೇಳಿದ್ದಾನೆ.
 
"ಅವರ ನೆರೆಹೊರೆಯವರಾದ ರಾಮ್ ಸೇವಾಕ್ ಮತ್ತು ರಾಮ್ ಸ್ವರೂಪ್ ಅವರು ಸೋನೆಲಾಲ್‌ಗೆ ಹಾವು ಕಚ್ಚದೆ ಎಂದು ಹೇಳಿದ್ದಾರೆ. ಹಾಗಾಗಿ ನಾವು ಕಚ್ಚಿರುವ ಗುರುತುಗಳನ್ನು ಹುಡುಕಲಾರಂಭಿಸಿದ್ದೇವು ಆದರೆ ಯಾವುದೇ ಗುರುತುಗಳು ಸಿಗಲಿಲ್ಲ. ಘಟನೆ ಸಂಭವಿಸಿದ ಸ್ಥಳದಲ್ಲಿ ಸೋನೆಲಾಲ್ ಒಬ್ಬರು ಇದ್ದರು ಎಂದು ಸೋನೆಲಾಲ್ ಅವರ ಸೋದರಳಿಯ ನನ್ನ‌ಹೇ ಹೇಳಿದ್ದಾರೆ, ಆದರೆ ಯಾರೋ ಒಬ್ಬ ಬಂದು ಅವರಿಗೆ ಹಾವು ಕಚ್ಚಿದೆ ಎಂದು ಹೇಳಿರುವ ಕಾರಣ ನಾವು ಸೋನೆಲಾಲ್ ಅವರಿಗೆ ತುರ್ತು ಔಷಧಿಗಳನ್ನು ನೀಡಿ, ಅವಲೋಕನದಡಿಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ಹಿತೇಶ್ ಹೇಳಿದ್ದಾರೆ. 
 
ವೈದ್ಯಕೀಯ ಅಧಿಕಾರಿ ಡಾ. ಮಹೇಂದ್ರ ವರ್ಮಾ ಅವರು, ವಿಷವನ್ನು ಒಳಗೊಂಡಿರುವ ಹಾವಿನ ದೇಹದ ಭಾಗವನ್ನು ಸೇವಿಸಿರುವ ಕಾರಣದಿಂದ ಸೋನೆಲಾಲ್ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
 
ಡಾ. ಎಸ್.ಸಿ. ತಿವಾರಿ ಅವರು "ಈ ವ್ಯಕ್ತಿಯ ನಡವಳಿಕೆಯು ಅಸಹಜವಾಗಿದೆ, ಇದು ಸಹಜ ಸ್ಥಿತಿಯಲ್ಲಿರುವ ಮಾನವನ ಪ್ರತಿಕ್ರಿಯೆಯಾಗಿಲ್ಲ. ಈ ರೀತಿಯಾಗಿ ವರ್ತಿಸುವವರು ಬಹಳ ಆಕ್ರಮಣಕಾರಿ ಅಥವಾ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿರುವವರಾಗಿರುತಾರೆ" ಎಂದು ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫೇಸ್ ಬುಕ್‌ನಲ್ಲಿ ವಿಡಿಯೋ ಹಂಚಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

ನಾಯಿಗಾಗಿ ಹೆತ್ತು, ಹೊತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ ಮಗ

ಪ್ರಿಯತಮ ಜತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ, ಎಸ್ಕೇಪ್ ಆಗಲು ಮಾಡಿದ ನಾಟಕ ಕೇಳಿದ್ರೆ ಶಾಕ್ ಆಗ್ತೀರಾ

Sukma Naxals Surrendered: 22 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣು

ಮುಂದಿನ ಸುದ್ದಿ
Show comments