Webdunia - Bharat's app for daily news and videos

Install App

ಅತ್ಯಾಚಾರ-ಕೊಲೆ ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಹೊರಗೆಳೆದು ಮರಣದಂಡನೆ ನೀಡಿದ ಜನರ ಗುಂಪು

ಅತಿಥಾ
ಮಂಗಳವಾರ, 20 ಫೆಬ್ರವರಿ 2018 (17:24 IST)
ಅತ್ಯಾಚಾರ ಹಾಗು ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಗಳಾಗಿದ್ದ ಇಬ್ಬರನ್ನು ಠಾಣೆಯಿಂದ ಹೊರಗೆಳೆದ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಘಟನೆ ಸೋಮವಾರದಂದು ಅರುಣಾಚಲ ಪ್ರದೇಶದ ಲೋಹಿತ್‌ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂನ ಟೀ ತೋಟದಲ್ಲಿ ಕಾರ್ಮಿಕರಾಗಿರುವ 30 ವರ್ಷದ ಸಂಜಯ್ ಸೊಬೊರ್‌ ಮತ್ತು 25 ವರ್ಷದ ಜಗದೀಶ್ ಲೋಹರ್ ಎಂಬುವವರನ್ನು ಜನರ ಗುಂಪು ಪೊಲೀಸ್ ಠಾಣೆಯಿಂದ ಮಾರುಕಟ್ಟೆ ಪ್ರದೇಶಕ್ಕೆ ಏಳೆದು ಪೊಲೀಸರ ಎದುರೇ ತಳಿಸಿ ಕೊಂದಿದ್ದಾರೆ. ನಂತರ ಅವರ ದೇಹಗಳನ್ನು ಮಾರುಕಟ್ಟೆ ಪ್ರದೇಶದಲ್ಲಿ ಎಸೆಯಲಾಗಿದೆ. ಆರೋಪಿಗಳಿಗೆ ಬೆಂಕಿ ಹಚ್ಚಲು ಮುಂದಾದ ಜನರ ಗುಂಪನ್ನು ಭದ್ರತಾ ಸಿಬ್ಬಂದಿಯವರು ತಡೆದರು.
 
ಫೆಬ್ರವರಿ 12 ರಂದು, ವಾಕ್ರೊ ಪೊಲೀಸ್ ಠಾಣೆಯ ಅಡಿಯಲ್ಲಿ ಐದುವರೆ ವರ್ಷದ ಹುಡುಗಿ ಹಳ್ಳಿಯಿಂದ ಕಾಣೆಯಾಗಿದ್ದಳು. ನಂತರ, ಮಗುವಿನ ಸಂಬಂಧಿಗಳು ರುಂಡರಹಿತ ಮತ್ತು ಅಂಗಹೀನಗೊಂಡ ದೇಹವನ್ನು ನಾಮ್ಗೊ ಗ್ರಾಮದ ಕಾಡಿನಲ್ಲಿರುವ ಕೊಳವೊಂದರ ಬಳಿ ಪತ್ತೆ ಮಾಡಲಾಯಿತು.
 
ನಂತರ, ಅತ್ಯಾಚಾರ ಮತ್ತು ಬಾಲಕಿಯ ಕೊಲೆಯ ಅನುಮಾನದ ಮೇಲೆ ಸೊಬೊರ್‌ ಮತ್ತು ಲೋಹರ್ ಎಂಬುವವರನನ್ನು ಬಂಧಿಸಲಾಯಿತು. ಇಬ್ಬರು ಅಪರಾಧವನ್ನು ಒಪ್ಪಿಕೊಂಡಿದ್ದರು. ಮತ್ತು ಇಬ್ಬರನ್ನು ಕೋರ್ಟ್‌ಗೆ ಹಾಜರು ಮಾಡಲಾಗಿತ್ತು.
 
ಪ್ರಕರಣದಲ್ಲಿ ಕೆಲ ಅನಾಮಧೇಯ ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಇದೇ ಸಂಬಂಧ ಮೂರು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
 
2015 ರಲ್ಲಿ ಇಂಥದ್ದೇ ಪ್ರಕರಣದಲ್ಲಿ ನಾಗಾಲ್ಯಾಂಡ್‌ನ ದಿಮಾಪುರ ಕೇಂದ್ರ ಕಾರಾಗೃಹದಲ್ಲಿದ್ದ ಅತ್ಯಾಚಾರ ಆರೋಪಿಯನ್ನು ಜನರ ಗುಂಪೊಂದು ಹೊರಗೆಳೆದು ಕೊಲೆ ಮಾಡಿತ್ತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments