Publish Date: Sat, 02 Dec 2017 (20:44 IST)
Updated Date: Sat, 02 Dec 2017 (20:48 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಸ್ ಬುಸ್ ಹಾವು ಬಿಡುವುದರಲ್ಲಿ ನಿಸ್ಸೀಮರು ಎಂದು ನೀರಾವರಿ ಖಾತೆ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ ಯಾವುದೇ ಹಗರಣಗಳೇ ನಡೆದಿಲ್ಲ. ಹಗರಣಗಳು ನಡೆದಿಲ್ಲವೆಂದಾದ ಮೇಲೆ ಯಾವ ದಾಖಲೆಗಳನ್ನು ಬಿಡುಗಡೆ ಮಾಡ್ತಾರೆ? ದಿನನಿತ್ಯ ಹಗರಣ ದಾಖಲೆಗಳನ್ನು ಬಿಡುಗಡೆ ಮಾಡ್ತೇನೆ ಎಂದು ಪೂಸಿ ಬಿಡುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಿಕೋಟಾದಲ್ಲಿ ನನ್ನ ವಿರುದ್ಧ ಇಂದು ಹಗರಣ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಯಡಿಯೂರಪ್ಪ ಗುಟುರು ಹಾಕಿದ್ದರು. ಆದರೆ, ಇದೀಗ ಜನೆವರಿಯಲ್ಲಿ ಬಿಡುಗಡೆ ಮಾಡ್ತೇನೆ ಎಂದು ಹೇಳ್ತಾರೆ. ಇದ್ರೆ ತಾನೇ ಬಿಡುಗಡೆ ಮಾಡೋಕೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರತಿಯೊಬ್ಬರ ದಾಖಲೆಗಳನ್ನು ಬಿಡುಗಡೆ ಮಾಡ್ತೇನೆ ಎಂದು ಹಲವು ವರ್ಷಗಳಿಂದ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ತಾಕತ್ತಿದ್ರೆ ಬಿಡುಗಡೆ ಮಾಡಲಿ ಎಂದು ನೀರಾವರಿ ಖಾತೆ ಸಚಿವ ಎಂ.ಬಿ.ಪಾಟೀಲ್ ಸವಾಲ್ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.