Publish Date: Sat, 02 Dec 2017 (16:35 IST)
Updated Date: Sat, 02 Dec 2017 (16:53 IST)
ಬಿಜೆಪಿ ಮುಖಂಡನೊಬ್ಬ ಗುಂಡಾಗಿರಿ ನಡೆಸಿ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹೆಬ್ಬಾಕ್ ರವಿ, ಬಾವಿಕಟ್ಟೆ ನಾಗಣ್ಣ ಎನ್ನುವವರಿಂದ ಖಾಸಗಿ ಚಾನೆಲ್ ವರದಿಗಾರ ವಾಗೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಚಾನೆಲ್ ವರದಿಗಾರ ವಾಗೀಶ್ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಮಾಡಿರುವುದರಿಂದ ಆಕ್ರೋಶಗೊಂಡ ಹೆಬ್ಬಾಕ್ ರವಿ, ಪ್ರೆಸ್‌ಮೀಟ್ ನೆಪದಲ್ಲಿ ಕರೆಸಿಕೊಂಡು ಏಕಾಏಕೀ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ತುಮಕೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಹೆಬ್ಬಾಕ ರವಿ ಮತ್ತು ಬಾವಿಕಟ್ಟಿ ನಾಗಣ್ಣ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸ್ಪಂದನ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.