ಕೋಲ್ಕತ್ತಾ: ಪ್ರತಿ ಬಾರಿ ತನ್ನ ಪುಟ್ಟ ಕಂದಮ್ಮ ನಿದ್ದೆಯಿಂದ ಎದ್ದಾ ತಕ್ಷಣ ಅಪ್ಪಾ ಎಲ್ಲಿ, ಎಲ್ಲಿ ಹೋಗಿರುವುದಾಗಿ ಕೇಳುವಾಗ ಆ ತಾಯಿಯಲ್ಲಿ ಕಣ್ನೀರು ಬಿಟ್ಟರೆ ಬೇರೇನೂ ಉತ್ತರ ಸಿಗುತ್ತಿಲ್ಲ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಶ್ಚಿಮ ಬಂಗಾಳದವರಾದ ಟೆಕಿ ಬಿತನ್ ಅಧಿಕಾರಿ ಕೊನೆಯುಸಿರೆಳೆದಿದ್ದಾರೆ. ಮಗ ಹಾಗೂ ಪತ್ನಿಯೊಂದಿಗೆ ರಜಾವನ್ನು ಕಳೆಯಲು ಕಾಶ್ಮೀರಕ್ಕೆ ತೆರಳಿದ್ದ ಈ ಕುಟುಂಬದಲ್ಲೀಗ ಕಣ್ಣೀರು ಬಿಟ್ಟರೆ ಬೇರೇನೂ ಇಲ್ಲ.
ಪಶ್ಚಿಮ ಬಂಗಾಳ ಮೂಲದ ಅಧಿಕಾರಿ, ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಫ್ಲೋರಿಡಾದಲ್ಲಿ ನೆಲೆಸಿದ್ದರು. ಸಂಬಂಧಿಕರನ್ನು ಭೇಟಿ ಮಾಡಲು ಏಪ್ರಿಲ್ 8 ರಂದು ಕೋಲ್ಕತ್ತಾಗೆ ಹಿಂದಿರುಗಿದ ಅವರು ರಜಾದಿನವನ್ನು ಕಳೆಯಲು ಪತ್ನಿ, ಮಗನ ಜತೆಗೆ ಕಾಶ್ಮೀರಕ್ಕೆ ತೆರಳಿದ್ದರು.
ಪತಿಯ ಅಗಲಿಕೆಯ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಬಿತನ್ ಪತ್ನಿ, ಮಗ ಮಲಗಿದ್ದ. ಈ ವೇಳೆ ಬಂದ ಉಗ್ರರು ನಮ್ಮ ಧರ್ಮವನ್ನು ಕೇಳಿದರು. ನನ್ನ ಗಂಡನನ್ನು ನಮ್ಮ ಮಗುವಿನ ಮುಂದೆಯೇ ಶೂಟ್ ಮಾಡಿ, ಕೊಂದರು. ನಾನು ಅವನು ಅಪ್ಪ ಎಲ್ಲಿ ಎಂದು ಕೇಳಿದಾಗ ಏನೆಂದು ಉತ್ತರಿಸಲಿ, ಹೇಗೆಂದೂ ವಿವರಿಸಲಿಕಣ್ಣೀರು ಹಾಕಿದರು.