Select Your Language

Notifications

webdunia
webdunia
webdunia
webdunia

Pehalgam Terror Attack Effect: ಶ್ರೀನಗರದಿಂದ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ

ಪಹಲ್ಗಾಮ್ ಭಯೋತ್ಪಾದಕ ದಾಳಿ

Sampriya

ನವದೆಹಲಿ , ಬುಧವಾರ, 23 ಏಪ್ರಿಲ್ 2025 (15:42 IST)
Photo Credit X
ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆ ಕಾಶ್ಮೀರ ಕಣಿವೆಯಲ್ಲಿ ಸಿಲುಕಿರುವ ಪ್ರವಾಸಿಗರು ತಮ್ಮ ಊರುಗಳಿಗೆ ಮರಳಲು ಭಾರಿ ಮೊತ್ತದ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಏಕೆಂದರೆ ಭಾರೀ ಬೇಡಿಕೆಯಿಂದಾಗಿ ವಿಮಾನ ಟಿಕೆಟ್‌ಗಳು ವಿಪರೀತವಾಗಿ ಏರಿಕೆ ಮಾಡಲಾಗಿದೆ.‌ ಮಂಗಳವಾರ ಸಂಜೆ ಭಯೋತ್ಪಾದಕರ ದಾಳಿಯ ಸುದ್ದಿ ಹೊರಬಿದ್ದ ನಂತರ ಭಾರತದ ಪ್ರಮುಖ ನಗರಗಳಿಗೆ ವಿಮಾನ ದರಗಳು ಗಗನಕ್ಕೇರಿವೆ.

ಏರ್‌ಲೈನ್ ನಿರ್ವಾಹಕರ ವೆಬ್‌ಸೈಟ್‌ಗಳಲ್ಲಿ ಹುಡುಕಾಟ ನಡೆಸಿದಾಗ ಟಿಕೆಟ್ ದರಗಳು ವಿಪರೀತವಾಗಿರುವುದು ಸೂಚಿಸುತ್ತವೆ.

ಇದೀಗ ಟಿಕೆಟ್ ಬುಕ್ ಮಾಡಲು ಹೊರಟಿರುವವರಿಗೆ ಟಿಕೆಟ್ ಮಾರಾಟವಾಗಿದೆ, ವಿಮಾನಗಳು ಲಭ್ಯವಿಲ್ಲ ಎಂಬಂತಹ ಸಂದೇಶಗಳನ್ನು ಎದುರಿಸಬೇಕಾಗುತ್ತದೆ.

ಏಪ್ರಿಲ್ 24, ಗುರುವಾರ, ಶ್ರೀನಗರದಿಂದ ದೆಹಲಿಗೆ ಎಕಾನಮಿ ಕ್ಲಾಸ್ ಟಿಕೆಟ್ ಇಂಡಿಗೋ ವಿಮಾನದ ಮೂಲಕ ಪ್ರಯಾಣಿಕನಿಗೆ ಸುಮಾರು ₹11,000-₹13,000.

ಸ್ಪೈಸ್‌ಜೆಟ್‌ನಲ್ಲಿ ₹11,000-₹12,000 ಏರ್ ಇಂಡಿಯಾದಲ್ಲಿ, ವೆಚ್ಚವು ಅಂದಾಜು ₹21,000-₹23,000

Share this Story:

Follow Webdunia kannada

ಮುಂದಿನ ಸುದ್ದಿ

Namma Metro:ತಂಬಾಕು ತಿನ್ನುವವರು ಮೆಟ್ರೋದಲ್ಲಿ ಹೋಗುವಾಗ ಹುಷಾರು, ಬೀಳುತ್ತೇ ದಂಡ