Select Your Language

Notifications

webdunia
webdunia
webdunia
webdunia

Pahalgam Terror Attack: ಇನ್ಮುಂದೆ ಭಾರತದಲ್ಲಿ ಪಾಕ್‌ನ ಅಧಿಕೃತ ಸೋಶಿಯಲ್ ಮೀಡಿಯಾ ವರ್ಕ್ ಆಗಲ್ಲ

ಪಹಲ್ಗಾಮ್ ಭಯೋತ್ಪಾದಕ ದಾಳಿ

Sampriya

ಬೆಂಗಳೂರು , ಗುರುವಾರ, 24 ಏಪ್ರಿಲ್ 2025 (16:00 IST)
Photo Credit X
ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಪಾಕ್‌ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಳೆದುಕೊಳ್ಳುವ ಮೂಲಕ ಭಾರತ ತಿರುಗೇಟು ನೀಡಿದೆ.

ಪ್ರಮುಖ ಐದಾರು ತೀರ್ಮಾನಗಳನ್ನು ತೆಗೆದುಕೊಂಡು ಪಾಕಿಸ್ತಾನಕ್ಕೆ ಈಗಾಗಲೇ ಬಿಸಿ ಮುಟ್ಟಿಸಿರುವ ಭಾರತ ಇದೀಗ ಚಾಲ್ತಿಯಲ್ಲಿದ್ದ ಪಾಕಿಸ್ತಾನ್ ಸರ್ಕಾರದ ಅಧಿಕೃತ ಎಕ್ಸ್ ಖಾತೆಯನ್ನೇ ಸ್ಥಗಿತಗೊಳಿಸಿದೆ.

ಇದೇ ರೀತಿ ಫೇಸ್‌ಬುಕ್ ಸೇರಿದಂತೆ ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿನ ಪಾಕ್ ಸರ್ಕಾರದ ಅಧಿಕೃತ ಖಾತೆಗಳನ್ನು ರದ್ದುಗೊಳಿಸಲಾಗಿದೆ.

ಈ ಮೂಲಕ ಪಾಕಿಸ್ತಾನ ಭಾರತದಲ್ಲಿ ತನ್ನ ಸಂವಹನ ಮಾಧ್ಯಮವಾಗಿ ಬಳಸುತ್ತಿದ್ದ Government Of Pakistan ಎಂಬ ಖಾತೆಯನ್ನು ಭಾರತದಲ್ಲಿ ಬಳಕೆಯಾಗದಂತೆ ಭಾರತ ಗತಡೆದಿಹಿದು ಪ್ರತ್ಯುತ್ತರ ಕೊಟ್ಟಿದೆ.

ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿಮೆ ಮಾಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರವು, ಭಾರತದಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರನ್ನು ದೇಶದಿಂದ ಹೊರಗೆ ಕಳುಹಿಸಲು ತೀರ್ಮಾನಿಸಿದೆ.

ಈ ನಿರ್ಧಾರವನ್ನು ಬುಧವಾರ ಸಂಜೆ ನಡೆದ ಭದ್ರತೆ ಕುರಿತ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Pahalgam Terror Attack: ತಾಯ್ನಾಡಿಗೆ ಸುರಕ್ಷಿತವಾಗಿ ಬಂದಿಳಿದ 178 ಕನ್ನಡಿಗರು