Select Your Language

Notifications

webdunia
webdunia
webdunia
webdunia

ಬಡವರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್: ಮೋದಿ ಸರ್ಕಾರದ ಹೊಸ ಯೋಜನೆ ವಿವರ ಇಲ್ಲಿದೆ

PM Modi
ನವದೆಹಲಿ: ದೇಶದ ಬಡವರಿಗೆ ಕೇಂದ್ರ ಸರ್ಕಾರ ಮತ್ತೊಂದು ಬಂಪರ್ ಯೋಜನೆ ಹೊರತಂದಿದೆ. ಪಿಎಂ ರಾಹತ್ ಎನ್ನುವ ಹೊಸ ಯೋಜನೆ ಜಾರಿಗೆ ಬರಲಿದ್ದು ಇದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಪಿಎಂ ರಾಹತ್ ಯೋಜನೆ ಎಂದರೆ ರಸ್ತೆ ಅಪಘಾತದಲ್ಲಿ ಸಂತ್ರಸ್ತರಾದವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರ ಸರ್ಕಾರ ಆರಂಭಿಸಿರುವ ಯೋಜನೆ ಇದಾಗಿದೆ. ರಸ್ತೆ ಅಪಘಾತವಾದವರಿಗೆ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಫೆಬ್ರವರಿ 14 ರಿಂದ ಜಾರಿಗೆ ತರಲಾಗಿದೆ. ಆರ್ಥಿಕವಾಗಿ ದುರ್ಬಲರಾದವರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವವರು ಈ ಯೋಜನೆಯ ನೆರವು ಪಡೆಯಬಹುದಾಗಿದೆ.

-ಅಪಘಾತವಾದ ತಕ್ಷಣ ಸಹಾಯವಾಣಿ 112 ಕ್ಕೆ ಕರೆ ಮಾಡಬೇಕು.
-ಅಪಘಾತವಾದವರು ಗೋಲ್ಡನ್ ಅವರ್ ನಲ್ಲೇ ಆಸ್ಪತ್ರೆಗೆ ತಲುಪುತ್ತಾರೆ.
-ಪಿಎಂ ರಾಹತ್ ಯೋಜನೆಯಲ್ಲಿ ಅಪಘಾತವಾದ 7 ದಿನಗಳವರೆಗೆ 1.5 ಲಕ್ಷ ರೂ.ವರೆಗೆ ನಗದುರಹಿತ ಸೇವೆ ಪಡೆಯಬಹುದಾಗಿದೆ.
- ಈ ಯೋಜನೆಯಡಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದು, ಪೊಲೀಸರ ದೃಢೀಕರಣ ಎಲ್ಲವೂ ಡಿಜಿಟಲೀಕರಣವಾಗಲಿದೆ.
-ಚಿಕಿತ್ಸೆ ನೀಡಿದ ಆಸ್ಪತ್ರೆಗೆ ಮೋಟಾರ್ ವಾಹನ ಅಪಘಾತನಿಧಿ ಯೋಜನೆಯಡಿಯಲ್ಲಿ ಹಣ ಪಾವತಿಯಾಗುತ್ತದೆ.
-ಅಪಘಾತದಲ್ಲಿ ನಿಯಮ ಉಲ್ಲಂಘನೆ ಮಾಡಿದ ವಾಹನಕ್ಕೆ ವಿಮೆ ಮಾಡಿಸಿದಲ್ಲಿ ಕಂಪನಿಗಳು ಪಾವತಿ ಮಾಡುತ್ತದೆ.
-ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ರಾಜ್ಯ ಆರೋಗ್ಯ ಸಂಸ್ಥೆ 10 ದಿನಗಳೊಳಗೆ ಹಣ ಪಾವತಿ ಮಾಡುತ್ತದೆ.

ದೇಶದಲ್ಲಿ ಪ್ರತಿ ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುತ್ತವೆ. ಆದರೆ ಅಪಘಾತಕ್ಕೀಡಾಗುವ ಬಡವರ್ಗದವರಿಗೆ ಆರ್ಥಿಕವಾಗಿ ಬಲ ತುಂಬುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಂತೇ ಪ್ರಮುಖ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ