Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಂತೇ ಪ್ರಮುಖ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ

Siddaramaiah-DK Shivakumar

Krishnaveni K

ಬೆಂಗಳೂರು , ಸೋಮವಾರ, 23 ಫೆಬ್ರವರಿ 2026 (11:34 IST)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗ ಡಿಕೆ ಶಿವಕುಮಾರ್ ಬಣದ ವಿರುದ್ಧ ಸಿದ್ದರಾಮಯ್ಯ ಪ್ರಮುಖ ಅಸ್ತ್ರ ಹೊರಹಾಕಿದ್ದಾರೆ.

ಇತ್ತೀಚೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿರುವ ಡಿಕೆ ಶಿವಕುಮಾರ್ ತಮಗೆ ಸೂಕ್ತ ಸಮಯದಲ್ಲಿ ಸಿಎಂ ಪಟ್ಟ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ತಕ್ಕಂತೆ ಅಸ್ಸಾಂ ಚುನಾವಣೆ ಹೊಣೆಯೂ ಡಿಕೆಶಿಗೆ ಹೆಗಲಿಗೊಪ್ಪಿಸಲಾಗಿದೆ.

ಇದರ ನಡುವೆಯೇ ಈಗ ಸಿದ್ದರಾಮಯ್ಯನವರು ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ತಮ್ಮದು ಕುರಿ ಕಾಯುವ ಸಮುದಾಯ ಎಂದು ಸಿಎಂ ಮೊನ್ನೆ ಟ್ವೀಟ್ ಮಾಡಿದ್ದರು. ಅವರ ಈ ಅಸ್ತ್ರ ಕಾಂಗ್ರೆಸ್ ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಈಗ ಕಾಂಗ್ರೆಸ್ ನಲ್ಲಿ ದಲಿತ ಸಮುದಾಯದವರು ಸಿಎಂ ಆಗಲಿ ಎನ್ನುವ ಕೂಗು ಹೆಚ್ಚಾಗುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಬಣವೂ ಬೆಂಬಲ ನೀಡುತ್ತಿದೆ. ಇದು ಸಿದ್ದರಾಮಯ್ಯಗೆ ಪ್ಲಸ್ ಪಾಯಿಂಟ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಡಲ ತೀರದಲ್ಲಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ ಜೋಡಿ: ಮುಂದೆ ಆಗಿದ್ದು ಮಾತ್ರ ಭಯಾನಕ Video