Select Your Language

Notifications

webdunia
webdunia
webdunia
webdunia

'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ನವದೆಹಲಿ , ಸೋಮವಾರ, 24 ಫೆಬ್ರವರಿ 2020 (14:04 IST)
ಅಹಮದಾಬಾದ್:ಇಂದು ಭಾರತಕ್ಕೆ ಭೇಟಿ ನೀಡಿದ ಟ್ರಂಪ್ ಗುಜರಾತ್  ನ ಮೊಟೆರಾ ಸ್ಟೇಡಿಯಂನಲ್ಲಿ  'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಭಾರತದ ಕುರಿತು, ಮೋದಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ನಮಸ್ತೆ ಎಂದು ಭಾಷಣ ಆರಂಭಿಸಿದ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿ ನನ್ನ ನಿಜವಾದ ಸ್ನೇಹಿತ ಎಂದು ಹೇಳಿದರು. ಮೋದಿ ನನ್ನ ಸ್ನೇಹಿತ ಎಂದು ಹೇಳಲು ಹೆಮ್ಮೆಯಾಗುತ್ತಿದೆ. 8 ಸಾವಿರ ಕೀ.ಮೀ ಪ್ರಯಾಣಿಸಿ ಇಲ್ಲಿಗೆ ಬಂದಿದ್ದೇವೆ. ಅಮೆರಿಕ ಎಂದೆಂದೂ ಭಾರತವನ್ನು ಗೌರವಿಸುತ್ತೆ, ಪ್ರೀತಿಸುತ್ತೆ ಎಂದು ಹೇಳಿದರು.


ಸುಂದರವಾದ ಮೊಟೆರಾ ಸ್ಟೇಡಿಯಂ ನಲ್ಲಿರುವುದು ಸಂತಸವಾಗಿದೆ.1.25 ಲಕ್ಷ ಜನ ಸೇರಿರುವುದು ಸಂತಸದ ವಿಷಯ . ಅತೀದೊಡ್ಡ ಕ್ರೀಡಾಂಗಣದಲ್ಲಿ ನನಗೆ ಸ್ವಾಗತ ನೀಡಿದ್ದರಿ.ಇದಕ್ಕಾಗಿ ಭಾರತೀಯರಿಗೆ ನಾನು ಸದಾ  ಆಭಾರಿಯಾಗಿದ್ದೇನೆ.ಮೊಟೆರಾದಲ್ಲಿ ನೀವು ನನಗೆ ನೀಡಿರುವ ಸ್ವಾಗತ ಅಮೆರಿಕನ್ನರಿಗೆ ನೀಡಿದ ಗೌರವ ಎಂದು ಟ್ರಂಪ್ ಹೇಳಿದ್ದಾರೆ.


ಭಾರತೀಯರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ.ಪ್ರಧಾನಿ ಮೋದಿ ಇಲ್ಲಿನ ಯಶಸ್ವಿ ನಾಯಕರಾಗಿದ್ದಾರೆ.ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರಾಗಿದ್ದಾರೆ.ಪ್ರಧಾನಿ ಮೋದಿ ಓರ್ವ ನಡೆದಾಡುವ ಕಥೆಯಾಗಿದ್ದಾರೆ. 70 ವರ್ಷದಲ್ಲಿ ಭಾರತ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದೆ. 27 ಕೋಟಿ ಜನರನ್ನು ಬಡತನದಿಂದ ಹೊರ ತಂದಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಯು ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆ : ಅಂಥದ್ದೇನಾಯ್ತು?