Select Your Language

Notifications

webdunia
webdunia
webdunia
webdunia

ಯುವಕನ ಪ್ರೇಮ ವಿರೋಧಿಸಿ ಪ್ರಿಯತಮೆ ಕುಟುಂಬದವರು ಮಾಡಿದ್ದೇನು?

ಯುವಕನ ಪ್ರೇಮ ವಿರೋಧಿಸಿ ಪ್ರಿಯತಮೆ ಕುಟುಂಬದವರು ಮಾಡಿದ್ದೇನು?
jaisalmer , ಮಂಗಳವಾರ, 19 ಡಿಸೆಂಬರ್ 2023 (10:18 IST)
ಯುವಕ ಅದೇ ಪ್ರದೇಶದ ಇಂಟರಮೀಡಿಯಟ್ ವಿದ್ಯಾರ್ಥಿನಿಯೊಬ್ಬಳನ್ನು ಪ್ರೇಮಿಸುತ್ತಿದ್ದ.  ಅವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಯುವಕನ ಪಾಲಕರು ಅವರ ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಯುವತಿಯ ಪಾಲಕರು ಮತ್ತು  ಸಂಬಂಧಿಕರಿಗೆ ಇದು ಇಷ್ಟವಿರಲಿಲ್ಲ. ಇದು ಕೊನೆಗೂ ಹತ್ಯೆಯ ಹಂತಕ್ಕೆ ತಲುಪಿದೆ.

ಯುವತಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ಯುವಕನೊಬ್ಬ ತನ್ನ ಜೀವವನ್ನೇ ಕಳೆದುಕೊಂಡ ದಾರುಣ ಘಟನೆ ವಿಶಾಖಪಟ್ಟಣಂನ ಮರಿಕಾವಲಸಾದಲ್ಲಿ ವರದಿಯಾಗಿದೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತನ್ನ ಮಗಳನ್ನು ಪ್ರೀತಿಸುತ್ತಿದ್ದ 21 ವರ್ಷದ ಯುವಕನನ್ನು ಕೊಂದು ಆತನ ದೇಹವನ್ನು ಬಾವಿಯೊಳಕ್ಕೆ ಎಸೆದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಸಿಟಿಯ ಪಿಎಂ ಪಲೆಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 
ಯುವಕ ಅದೇ ಪ್ರದೇಶದ ಇಂಟರಮೀಡಿಯಟ್ ವಿದ್ಯಾರ್ಥಿನಿಯೊಬ್ಬಳನ್ನು ಪ್ರೇಮಿಸುತ್ತಿದ್ದ.  ಅವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಯುವಕನ ಪಾಲಕರು ಅವರ ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಯುವತಿಯ ಪಾಲಕರು ಮತ್ತು  ಸಂಬಂಧಿಕರಿಗೆ ಇದು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಇತ್ತೀಚಿಗೆ ಯುವತಿಯ ತಂದೆ ಮತ್ತು ಆತನ ಕೆಲವು ಸ್ನೇಹಿತರು ಸುರಿಬಾಬು ಮತ್ತು ಆತನ ಕುಟುಂಬದ ಸದಸ್ಯರ ಜತೆಯಲ್ಲಿ ಹೊಡೆದಾಟಕ್ಕಿಳಿದಿದ್ದರು. ಆ ಸಮಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಎರಡು ಕಡೆಯವರಿಗೆ ತಿಳಿ ಹೇಳಿದ್ದರು. 
 
ಮೃತನ ಕುಟುಂಬಸ್ಥರು ನೀಡಿರುವ ದೂರಿನ ಪ್ರಕಾರ ನವೆಂಬರ್ 5 ರಂದು ತನ್ನ ಪಾಲಕರಿಗೆ ಫೋನ್ ಕರೆ ಮಾಡಿದ ಯುವಕ, ತನ್ನ ಪ್ರಿಯತಮೆಯ ತಂದೆ ಕರೆದಿದ್ದಾನೆ, ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಆದರೆ ಅಂದು ಆತ ಮನೆಗೆ ಹಿಂತಿರುಗಿಲ್ಲ. 
 
ಆತನಿಗೆ ಏನೋ ಅಪಾಯವಾಗಿದೆ ಎಂಬ ಅನುಮಾನಕ್ಕೊಳಗಾದ ಆತನ ತಂದೆತಾಯಿಗಳು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು. ಆದರೆ ಅವರ ದೂರನ್ನು ಗಂಭೀರವಾಗಿ ತೆಗೆದುಕೊಳ್ಳದ ಪೊಲೀಸರು, ಯುವತಿ ಪಾಲಕರ ಜತೆಯಲ್ಲಿದ್ದು, ನಾಪತ್ತೆಯಾಗಿರುವ ಹುಡುಗ ಹಿಂತಿರುಗಿ ಬರುತ್ತಾನೆ. ಭಯ ಪಡಬೇಡಿ ಎಂದು ಹೇಳಿದ್ದಾರೆ. 
 
ಹೀಗಾಗಿ ಯುವಕನ ಸಂಬಂಧಿಕರು ಆತನಿಗಾಗಿ ಹುಡುಕಾಡಲು ಪ್ರಯತ್ನಿಸಿದರು ಮತ್ತು ಶುಕ್ರವಾರ ಬೆಳಿಗ್ಗೆ, ಬಾವಿಯೊಂದರಲ್ಲಿ ಆತನ ಮೃತ ದೇಹ ಪತ್ತೆಯಾಯಿತು. ಬಾವಿಯ ಬಳಿಗೆ ಸೇರಿದ ಮೃತನ ಸಂಬಂದಿಕರು ಯುವತಿಯ ಪಾಲಕರು ತಮ್ಮ ಮಗನನ್ನು ಸಾಯಿಸಿದ್ದಾರೆ, ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದರು.
 
ಯುವಕನ ಮೃತ ದೇಹವನ್ನು ಬಾವಿಯಿಂದ ತೆಗೆದ ಪೊಲಿಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಯುವಕನ ದೇಹದ ಮೇಲೆ ಗಾಯದ ಗುರುತುಗಳಿದ್ದು, ಆತನನ್ನು ಸಾಯಿಸಿ ಬಾವಿಯಲ್ಲಿ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ.
  
ದೂರಿನ ಆಧಾರದ ಮೇಲೆ ಯುವತಿಯ ತಂದೆ  ಮತ್ತು ಇತರ 7 ಜನರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಿದ್ದು ಮತ್ತದೇ ‘ಅಪರಿಚಿತ’ ಟೀಂ?!