Select Your Language

Notifications

webdunia
webdunia
webdunia
webdunia

ಆನೆಯ ಮುಂದೆ ಚೆಲ್ಲಾಟವಾಡಲು ಹೋಗಿ ಒದೆ ತಿಂದವನ ಕಥೆ

youth
ranathambore , ಸೋಮವಾರ, 18 ಡಿಸೆಂಬರ್ 2023 (14:14 IST)
ಸಿನೆಮಾದಲ್ಲಿ ಹೀರೋ ಆನೆಯ ಸೊಂಡಿಲಿನಿಂದ ಮೇಲಕ್ಕೆ ಏರಿ ಕೂಡುವಂತೆ, ತಾನೇನು ಕಮ್ಮಿಯಿಲ್ಲ ನಾನೇ ಬಾಹುಬಲಿ ಎನ್ನುತ್ತಾ ಆನೆಯ ಸೊಂಡಿಲಿನಿಂದ ಏರಲು ಪ್ರಯತ್ನಿಸಿದ್ದಾನೆ. ಕೂಡಲೇ ಆನೆ ಈ ನಕಲಿ ಬಾಹುಬಲಿಯನ್ನು ಎತ್ತಿ ಬಿಸಾಕಿದ ಘಟನೆ ವರದಿಯಾಗಿದೆ.
 
ನಾನೇ ಬಾಹುಬಲಿ ಎಂದು ಆನೆಯ ಮುಂದೆ ಸ್ಟಂಟ್ ಮಾಡಲು ಹೋದ ಭೂಪನೊಬ್ಬ ಸಕತ್ತಾಗಿ ಒದೆ ತಿಂದ ಘಟನೆ ನಡೆದಿದೆ. ನಕಲಿ ಬಾಹುಬಲಿ ಮೂಳೆಗಳು ಮುರಿದು ಹೋಗಿದ್ದು, ಮೂರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆತನನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
 
ಸಿನೆಮಾಗಳಲ್ಲಿ ಸ್ಟಂಟ್ ಮಾಡುವಂತೆ ನಿಜ ಜೀವನದಲ್ಲಿ ಮಾಡಲು ಹೋದರೆ ಯಾವ ಗತಿಯಾಗುತ್ತದೆ ಎನ್ನುವುದನ್ನು ಈ ಭೂಪನಿಂದ ನೋಡಿ ತಿಳಿಯಬೇಕಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹವಾಗಲ್ಲ ಎಂದ ಯುವತಿಗೆ ಯುವಕ ಏನ್ ಮಾಡ್ದ ಗೊತ್ತಾ?