Daily Horoscope

Select Your Language

Notifications

webdunia
webdunia
webdunia
webdunia

ಮದ್ಯದ ಅಮಲಿನಲ್ಲಿ ಪತ್ನಿಗೆ ಪತಿ ಮಾಡಿದ್ದೇನು?

ವಿಶಾಖಪಟ್ಟಣ
ವಿಶಾಖಪಟ್ಟಣ : ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ತ್ನ 28 ವರ್ಷದ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಆರೋಪಿ ಈಶ್ವರ್ ರಾವ್ ಎಂದು ಗುರುತಿಸಲಾಗಿದೆ. ಮದ್ಯದ ಚಟಕ್ಕೆ ಬಿದ್ದ ಆರೋಪಿ ಕಂಠಪೂರ್ತಿ ಕುಡಿದು ಬಂದು ಪತ್ನಿಯನ್ನು ಥಳಿಸುತ್ತಿದ್ದ. ಈ ಬಗ್ಗೆ ದಂಪತಿಯ ನಡುವೆ ಜಗಳ ಶುರುವಾಗಿದೆ. ಕೋಪದಿದ ಆತ ಶೌಚಾಲಯ ಕ್ಲೀನ್ ಗೆಂದು ತಂದಿಟ್ಟ ಆಸಿಡ್ ನ್ನು ಪತ್ನಿಯ ಮುಖದ ಮೇಲೆ ಎಸೆದಿದ್ದಾನೆ. ಆಗ ತಾಯಿಯನ್ನು ಕಾಪಾಡಲು ಬಂದ 12 ವರ್ಷದ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ.

ತಾಯಿ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಾ ಎಂದು ಕರೆದ ಮಗುವಿಗೆ ಪೊಲೀಸ್ ಕಾನ್ ಸ್ಟೇಬಲ್ ಹೀಗಾ ಮಾಡೋದು?