Select Your Language

Notifications

webdunia
webdunia
webdunia
webdunia

ಬಾಲಕಿಯರಿಗಾಗಿ 50 ಪಿಂಕ್ ಶೌಚಾಲಯ

ಬಾಲಕಿಯರಿಗಾಗಿ 50 ಪಿಂಕ್ ಶೌಚಾಲಯ
ಗದಗ , ಶುಕ್ರವಾರ, 24 ಜುಲೈ 2020 (20:08 IST)
ಬಾಲಕಿಯರಿಗಾಗಿ 50 ಪಿಂಕ್ ಶೌಚಾಲಯ ನಿರ್ಮಾಣಕ್ಕೆ ಜಿಪಂ ಅಧ್ಯಕ್ಷ ಆದೇಶ ನೀಡಿದ್ದಾರೆ.

ಶೌಚಾಲಯ ಕೊರತೆ ಇರುವ ಗದಗ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪ್ರಥಮ ಹಂತದಲ್ಲಿ ಬಾಲಕಿಯರಿಗಾಗಿ 50 ಪಿಂಕ್ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಅವರು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಗದಗ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕೊರತೆ ಇರುವ ಶೌಚಾಲಯಗಳ ಕುರಿತು ಮಾಹಿತಿ ಪಡೆದು, ಆಯ್ದ ಶಾಲೆಗಳನ್ನು ಗುರುತಿಸಲಾಗಿದೆ.

ಪಿಂಕ್ ಶೌಚಾಲಯ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಹಾಗೂ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಪಿಂಕ್ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ : ಅಂತ್ಯಸಂಸ್ಕಾರ ವೇಳೆ ಮಹಾ ಎಡವಟ್ಟು