Select Your Language

Notifications

webdunia
webdunia
webdunia
webdunia

ತಾಯಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಗೆ ಮಗ ಮಾಡಿದ್ದೇನು ಗೊತ್ತಾ?

ನಾಗ್ಪುರ
ನಾಗ್ಪುರ: 15 ವರ್ಷದ ಹುಡುಗನೊಬ್ಬ ತನ್ನ ತಾಯಿಯ ಪ್ರೇಮಿಯನ್ನು ತನ್ನ ಸ್ನೇಹಿತರ ಸಹಾಯದಿಂದ ಅಪಹರಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 

ಆರೋಪಿ ಹುಡುಗನ ತಾಯಿ ಸಂತ್ರಸ್ತನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದರಿಂದ ಆತನ ತಾಯಿ ಮತ್ತು ತಂದೆಯ ನಡುವೆ ಜಗಳವಾಗುತ್ತಿತ್ತು. ಇದರಿಂದ ಕೋಪಗೊಂಡ ಆರೋಪಿ ಹುಡುಗ ತನ್ನ ಮೂವರು ಸ್ನೇಹಿತರ ಜೊತೆ ಸೇರಿ ಸಂತ್ರಸ್ತನನ್ನು ಬೈಕ್ ನಲ್ಲಿ ಅಪಹರಿಸಿದ್ದಾರೆ. ಆ ವೇಳೆ ಪೊಲೀಸರು ತಿರುಗಾಡುತ್ತಿರುವುದನ್ನು ನೋಡಿದ ಸಂತ್ರಸ್ತ ಅವರಿಂದ ತಪ್ಪಿಸಿಕೊಂಡಿದ್ದಾನೆ.

ಆತ ಈ ಬಗ್ಗೆ ಪೊಲೀಸರು ಹಾಗೂ ಆತನ ತಾಯಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಣೆಯಲ್ಲಿ ಕೂಡಿ ಹಾಕಿ ತಂದೆಯನ್ನು ಕೊಂದ ಮಗ