Select Your Language

Notifications

webdunia
webdunia
webdunia
webdunia

ಕೋಣೆಯಲ್ಲಿ ಕೂಡಿ ಹಾಕಿ ತಂದೆಯನ್ನು ಕೊಂದ ಮಗ

webdunia
  • facebook
  • twitter
  • whatsapp
share
ಶನಿವಾರ, 23 ಜನವರಿ 2021 (10:47 IST)
ಕೊಚ್ಚಿ : 42 ವರ್ಷದ ವ್ಯಕ್ತಿಯೊಬ್ಬ 80 ವರ್ಷದ ತಂದೆಯನ್ನು ಮನೆಯ ಕೋಣೆಯಲ್ಲಿ ಬೀಗ ಹಾಕಿ ಕೊಂದ ಅಮಾನವೀಯ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಮುಂಡಕ್ಕಾಯಂ ಪಟ್ಟಣದಲ್ಲಿ ನಡೆದಿದೆ.

ಕುಡಿತದ ದಾಸನಾಗಿದ್ದ ಆರೋಪಿ ಮನೆಯಿಂದ ಹೊರಗೆ ಹೋಗುವಾಗ ತನ್ನ ವಯಸ್ಸಾದ ತಂದೆತಾಯಿಯನ್ನು ಕೋಣೆಯಲ್ಲಿ ಕೂಡುಹಾಕುತ್ತಿದ್ದ. ಅಲ್ಲದೇ ಅವರಿಗೆ ಯಾರು ಸಹಾಯ ಮಾಡಬಾರದೆಂದು ಮನೆಯ ಮುಂದೆ ನಾಯಿಯನ್ನು ಕಟ್ಟುತ್ತಿದ್ದ. ಇದರಿಂದ ತಂದೆ ಹಸಿವಿನಿಂದ ಹದಗೆಟ್ಟ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ  ಬಂದ ಪೊಲೀಸರು ವೃದ್ಧರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಂದೆ ಸಾವನಪ್ಪಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಆತ ಹಸಿವಿನಿಂದ ಸತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಸಚಿವ ಬಿ.ಸಿ.ಪಾಟೀಲ್ ರನ್ನು ತರಾಟೆಗೆ ತೆಗೆದುಕೊಂಡ ರೈತರು