Publish Date: Mon, 01 Feb 2021 (09:21 IST)
Updated Date: Mon, 01 Feb 2021 (09:27 IST)
ಪಾಟ್ನಾ : ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನಲೆಯಲ್ಲಿ 34 ವರ್ಷದ ಮಹಿಳೆ ತನ್ನ 21 ವರ್ಷದ ಮಾಜಿ ಪ್ರೇಮಿಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತಿ ಕೆಲಸದ ನಿಮಿತ್ತ ಬೆರೆ ಕಡೆ ಇದ್ದರೆ ಮಕ್ಕಳು ಸಂಬಂಧಿಕರ ಮನೆಯಲ್ಲಿದ್ದರು. ಆ ವೇಳೆ ಮದ್ಯ ಸೇವಿಸಿ ಈಕೆಯ ಮನೆಗೆ ಬಂದ ಮಾಜಿ ಪ್ರೇಮಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ.