Select Your Language

Notifications

webdunia
webdunia
webdunia
webdunia

ಬಜೆಟ್ ಬಗ್ಗೆ ನನಗೇನೂ ನಿರೀಕ್ಷೆಯಿಲ್ಲ, ನಿಮಗಿದೆಯೇನ್ರೀ? ಸಿದ್ದರಾಮಯ್ಯ ವ್ಯಂಗ್ಯ

ಬಜೆಟ್ ಬಗ್ಗೆ ನನಗೇನೂ ನಿರೀಕ್ಷೆಯಿಲ್ಲ, ನಿಮಗಿದೆಯೇನ್ರೀ? ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು , ಸೋಮವಾರ, 1 ಫೆಬ್ರವರಿ 2021 (08:53 IST)
ಬೆಂಗಳೂರು: ಇಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಲಿರುವ ಕೇಂದ್ರ ಬಜೆಟ್ 2021 ರ ಬಗ್ಗೆ ಏನೇನು ನಿರೀಕ್ಷೆಗಳಿವೆ ಎಂಬ ಪ್ರಶ್ನೆಗೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ.

 

ಈ ಬಜೆಟ್ ಬಗ್ಗೆ ನನಗೇನೂ ನಿರೀಕ್ಷೆಯಿಲ್ಲ. ಈಗ ಅಂತಲ್ಲ, ಈ ಸರ್ಕಾರದ ಯಾವ ಬಜೆಟ್ ಮೇಲೂ ಯಾವ ನಿರೀಕ್ಷೆಯೂ ಇಲ್ಲ. ನಿಮಗೇನಾದರೂ ಇದೆಯೇನ್ರೀ? ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಇದ್ದ ಜಿಡಿಪಿ ಈಗ ಪ್ರತಿವರ್ಷವೂ ಇಳಿಕೆಯಾಗುತ್ತಾ ಬರುತ್ತಿದೆ ಹೊರತು ಈ ಸರ್ಕಾರದ್ದು ಬೇರೇನೂ ಸಾಧನೆಯಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಬಜೆಟ್ 2021 ರಲ್ಲಿ ಇವರೇ ಟಾರ್ಗೆಟ್