Publish Date: Mon, 01 Feb 2021 (08:43 IST)
Updated Date: Mon, 01 Feb 2021 (08:48 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಬಜೆಟ್ 2021 ರಲ್ಲಿ ಗ್ರಾಮೀಣ ಭಾಗದ ಬಡವರು ಮತ್ತು ರೈತರಿಗೆ ಬಂಪರ್ ಪ್ಯಾಕೇಜ್ ನಿರೀಕ್ಷಿಸಲಾಗಿದೆ.
ಕೊರೋನಾದಿಂದಾಗಿ ನಷ್ಟಕ್ಕೆ ಸಿಲುಕಿರುವ ಆರ್ಥಿಕತೆ ಸರಿದೂಗಿಸಲು ನಿರ್ಮಲಾ ಹಲವಾರು ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಆರ್ಥಿಕತೆ ಸರಿದಾರಿಗೆ ತರಲು ಗ್ರಾಮೀಣ ಭಾಗದ ಬಡವರು, ಕೈಗಾರಿಕೆಗಳು ಮತ್ತು ರೈತರಿಗೆ ಉತ್ತೇಜನ ನೀಡುವ ಪ್ಯಾಕೇಜ್ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.