Publish Date: Sat, 10 Oct 2020 (08:48 IST)
Updated Date: Sat, 10 Oct 2020 (16:37 IST)
ರಿಷಿಕೇಶ್ : ಯೋಗದ ಬಗ್ಗೆ ಆಸಕ್ತಿ ಹೊಂದಿರುವ 37 ವರ್ಷದ ಅಮೇರಿಕಾದ ಮಹಿಳೆಯ ಮೇಲೆ ಸ್ಥಳೀಯ ನಿವಾಸಿಯೊಬ್ಬ ಹಲವು ಬಾರಿ ಮಾನಭಂಗ ಎಸಗಿದ ಘಟನೆ ರಿಷಿಕೇಶ್ ನಲ್ಲಿ ನಡೆದಿದೆ.
ಅಭಿನವ್ ರಾಯ್ ಇಂತಹ ಕೃತ್ಯ ಎಸಗಿದ ಕಾಮುಕ ಆರೋಪಿ. ಈತ ಮಹಿಳೆಗೆ ಹಲವು ಬಾರಿ ಕರೆ ಮಾಡಿ ಆಕೆಯ ಬಳಿ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಆತ ಮಹಿಳೆಯ ಮನೆಯ ಬಾಲ್ಕನಿಯಿಂದ ನುಸುಳಿಕೊಂಡು ಬಂದು ಮಾನಭಂಗ ಎಸಗಿದ್ದಾನೆ. ಬಳಿಕ ಆಕೆಗೆ ಯೋಗದ ಬಗ್ಗೆ ಇರುವ ಆಸಕ್ತಿಯನ್ನು ಬಳಸಿಕೊಂಡು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆದರೆ ಪ್ರಕರಣ ಹಿಂಪಡೆಯುವಂತೆ ಆರೋಪಿ ತಂದೆ ಮಹಿಳೆಯ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.