Publish Date: Sat, 17 Oct 2020 (07:54 IST)
Updated Date: Sat, 17 Oct 2020 (07:56 IST)
ಉತ್ತರ ಪ್ರದೇಶ : ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಆಸ್ಪತ್ರೆಗೆ ತೆರಳುತ್ತಿದ್ದ 17 ವರ್ಷದ ಹುಡುಗಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಜಲಾನ್ ಜಿಲ್ಲೆಯ ಓರೈ ಪ್ರದೇಶದಲ್ಲಿ ನಡೆದಿದೆ.
ತಾಯಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ತಂದೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು, ರಾತ್ರಿ ಸುಮಾರು 12 ಗಂಟೆಗೆ ಹುಡುಗಿ ಆಸ್ಪತ್ರೆಗೆ ತೆರಳಿದಾಗ ಾಕೆಯನ್ನು ಹಿಂಬಾಲಿಸಿದ ಯುವಕರಿಬ್ಬರು ಅವಳನ್ನು ಅಪಹರಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮಾನಭಂಗ ಎಸಗಿ ಹುಡುಗಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಬಳಿಕ ಮನೆ ತಲುಪಿದ ಹುಡುಗಿ ತಂದೆಗೆ ಈ ವಿಚಾರ ತಿಳಿಸಿದ ಕಾರಣ ತಂದೆ ಓರೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.