Publish Date: Thu, 17 Sep 2020 (08:06 IST)
Updated Date: Thu, 17 Sep 2020 (08:08 IST)
ಲುಧಿಯಾನ : ಮದುವೆಯಾಗುವುದಾಗಿ ನಂಬಿಸಿ ವ್ತಕ್ತಿಯೊಬ್ಬ ಮಹಿಳೆಯನ್ನು ತನ್ನ ಆಸೆ ಪೂರೈಸಿಕೊಳ್ಳಲು ಬಳಸಿಕೊಂಡ ಘಟನೆ ಮಾಡೆಲ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಂಕಿತನನ್ನು ಅಬ್ದುಲಾಪುರ ಬಸ್ತಿ ನಿವಾಸಿ ರಾಜ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬಳು 2016ರಲ್ಲಿ ಫಿಲ್ಲೌರ್ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಆದರೆ ಕೆಲವು ವೈವಾಹಿಕ ವಿವಾದದಿಂದಾಗಿ ಆಕೆ ತನ್ನ ಗಂಡನನ್ನು ಬಿಟ್ಟು ತನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದಾಳೆ. ನೆರೆಮನೆಯಲ್ಲಿ ತಂಗಿದ್ದ ರಾಜ್ಬೀರ್ ಈಕೆಯೊಂದಿಗೆ ಸ್ನೇಹ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಿದ್ರೆ ಮಾತ್ರೆ ಹಾಕಿದ ಜ್ಯೂಸ್ ನ್ನು ನೀಡಿ ಆಕೆಯ ಮೇಲೆ ಮಾನಭಂಗ ಎಸಗುತ್ತಿದ್ದ. ಹಾಗೇ ಫೋಟೊಗಳನ್ನು ಕೂಡ ತೆಗೆಯುತ್ತಿದ್ದ.
ಆದರೆ ಕೊನೆಗೆ ಮದುವೆಗೆ ನಿರಾಕರಿಸಿದ ಆತ ಫೋಟೊಗಳನ್ನು ತೋರಿಸಿ ಆಕೆಯನ್ನು ಹೆದರಿಸಿ ಅವಳನ್ನು ತನ್ನ ಆಸೆ ಪೂರೈಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ. ಈ ಬಗ್ಗೆ ಮಹಿಳೆ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ.