Select Your Language

Notifications

webdunia
webdunia
webdunia
webdunia

ಗೆಳತಿಯ ಮನೆಯಲ್ಲಿ ತನ್ನ ಸ್ನೇಹಿತ ಇರುವುದನ್ನು ಕಂಡು ವ್ಯಕ್ತಿಯೊಬ್ಬ ಮಾಡಿದ್ದೇನು?

ಗೆಳತಿಯ ಮನೆಯಲ್ಲಿ ತನ್ನ ಸ್ನೇಹಿತ ಇರುವುದನ್ನು ಕಂಡು ವ್ಯಕ್ತಿಯೊಬ್ಬ ಮಾಡಿದ್ದೇನು?
ಹೈದರಾಬಾದ್ , ಶನಿವಾರ, 4 ಜುಲೈ 2020 (09:22 IST)
Normal 0 false false false EN-US X-NONE X-NONE

ಹೈದರಾಬಾದ್ : ಸ್ನೇಹಿತೆಯ ಮನೆಯಲ್ಲಿ ತನ್ನ ಸ್ನೇಹಿತ ಇರುವುದನ್ನು ಕಂಡು ವ್ಯಕ್ತಿಯೊಬ್ಬ ಕೋಪದಿಂದ ಸ್ನೇಹಿತೆಯ 6 ವರ್ಷದ ಮಗಳನ್ನು ಕೊಲೆ ಮಾಡಿದ ಘಟನೆ ತೆಲಂಗಾಣದ ಮೇಡ್ಚಲ್ ಜಿಲ್ಲೆಯಲ್ಲಿ ನಡೆದಿದೆ.

ಕರುಣಾಕರ್ ಇಂತಹ ಕೃತ್ಯ ಎಸಗಿದ ಆರೋಪಿ. ಮಹಿಳೆ ಪ್ರೀತಿಸಿ ಮದುವೆಯಾಗಿದ್ದು, ಈಕೆಗೆ 6 ವರ್ಷದ ಮಗಳಿದ್ದಳು. ಈಕೆಗೆ   ಫೇಸ್ ಬುಕ್ ನಲ್ಲಿ ಕರುಣಾಕರ್ ಪರಿಚಯವಾಗಿದ್ದಾನೆ. ಬಳಿಕ ಕರುಣಾಕರ್ ತನ್ನ ಸ್ನೇಹಿತ ರಾಜಶೇಖರ್ ಗೂ ಮಹಿಳೆಯನ್ನು ಪರಿಚಯ ಮಾಡಿಕೊಟ್ಟಿದ್ದಾನೆ. ಆದರೆ ಮಹಿಳೆ ಕರುಣಾಕರ್ ಗಿಂತ ರಾಜಶೇಖರ್ ಜೊತೆ ಆತ್ಮೀಯಳಾಗಿದ್ದಳು. ಇದರಿಂದ ಕೋಪಗೊಂಡ ಕರುಣಾಕರ್ , ರಾಜಶೇಕರ್ ಒಮ್ಮೆ ಮಹಿಳೆಯ ಮನೆಗೆ ಬಂದಾಗ ಮನೆಗೆ ನುಗ್ಗಿಆಕೆಯ ಮಗಳ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ರಾಜಶೇಖರ್ ಮೇಲೆ ಹಲ್ಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹಸುಗಳು ಬೆಳೆ ಹಾಳು ಮಾಡಬಾರದೆಂದು ನೀರಿಗೆ ವಿಷ ಬೆರೆಕೆ; 12ಕ್ಕೂ ಹೆಚ್ಚು ಹಸುಗಳು ಸಾವು