ಫೋರ್ನ್ ಚಟಕ್ಕೆ ಬಿದ್ದ ಬಾಲಕ ಮಾಡಿದ ಇಂತಹ ನೀಚ ಕೆಲಸ

ಶುಕ್ರವಾರ, 1 ನವೆಂಬರ್ 2019 (09:03 IST)
ಮುಂಬೈ : ಫೋರ್ನ್ ಚಟಕ್ಕೆ 13 ವರ್ಷದ ಬಾಲಕನೊಬ್ಬ ತನ್ನ 6 ವರ್ಷದ ಸೋದರ ಸಂಬಂಧಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದೆ.

 


ಫೋರ್ನ್ ವಿಡಿಯೋ ನೋಡುವ ಚಟ ಬೆಳೆಸಿಕೊಂಡ ಬಾಲಕ ದೀಪಾವಳಿ ಹಬ್ಬದಂದು ಹೊರಗೆ ಪಟಾಕಿ ಹೊಡೆಯುತ್ತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಾಡಲು ಪ್ರಯತ್ನಿಸಿದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

 

ಇತ್ತ ಮನೆಯವರು ಬಾಲಕಿ ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಾಲಕಿಯ ಪತ್ತೆಗಾಗಿ ಹುಡುಕಾಡಿದಾಗ ಆಕೆಯ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬಾಲಕನ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. 

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನವಜಾತ ಹೆಣ್ಣು ಮಗುವನ್ನು ಜೀವಂತವಾಗಿ ಹೂಳಲು ಬಂದ ಪಾಪಿಗಳಿಗೆ ಆಗಿದ್ದೇನು ಗೊತ್ತಾ?