ನವಜಾತ ಹೆಣ್ಣು ಮಗುವನ್ನು ಜೀವಂತವಾಗಿ ಹೂಳಲು ಬಂದ ಪಾಪಿಗಳಿಗೆ ಆಗಿದ್ದೇನು ಗೊತ್ತಾ?

ಶುಕ್ರವಾರ, 1 ನವೆಂಬರ್ 2019 (09:01 IST)
ಹೈದರಾಬಾದ್ : ಇಬ್ಬರು ವ್ಯಕ್ತಿಗಳು ನವಜಾತ ಹೆಣ್ಣುಮಗುವನ್ನು ಜೀವಂತವಾಗಿ ಹೂಳಲು ಮುಂದಾದ ಘಟನೆ ಹೈದರಾಬಾದ್ ನ ಜುಬಲಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಇಬ್ಬರು ವ್ಯಕ್ತಿಗಳು ಚೀಲವೊಂದನ್ನು ತೆಗೆದುಕೊಂಡು ಬಂದು ಬಸ್ ನಿಲ್ದಾಣದ ಬಳಿ ಗುಂಡಿ ತೆಗೆಯುತ್ತಿರುವುದನ್ನ ಕಂಡ ಆಟೊ ಚಾಲಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಗಳನ್ನು ವಿಚಾರಿಸಿದಾಗ ಮಗು ಸತ್ತು ಹೋಗಿದ್ದ ಕಾರಣ ಅದನ್ನು ಹೂಳಲು ಬಂದಿರುವುದಾಗಿ ಹೇಳಿದ್ದಾರೆ. ಅವರ ಮಾತಿನಿಂದ ಅನುಮಾನಗೊಂಡ ಪೊಲೀಸರು ಚೀಲ ತೆರೆದು ನೋಡಿದಾಗ ಮಗು ಇನ್ನು ಜೀವಂತವಾಗಿರುವುದು ತಿಳಿದುಬಂದಿದೆ.


ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಮುಂದಾದ ಸರ್ಕಾರ