ಮೂರು ಮದುವೆಯಾಗುವ ಆಸೆಗೆ ಬಿದ್ದ ಭೂಪ ಮಾಡಿದ್ದೇನು ಗೊತ್ತಾ?

ಸೋಮವಾರ, 28 ಅಕ್ಟೋಬರ್ 2019 (06:57 IST)
ಭೋಪಾಲ್ : ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಪ್ರಾಪ್ತ ಸೋದರಿಯನ್ನು ಮದುವೆಯಾಗುವ ಆಸೆಯಿಂದ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಾಡಿಗೆ ಮನೆ ಮಾಡಿ ಇರಿಸಿಕೊಂಡ ಘಟನೆ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.

ಈ ವ್ಯಕ್ತಿಗೆ ಈಗಾಗಲೇ ಇಬ್ಬರು ಹೆಂಡತಿಯರು ಹಾಗೂ ನಾಲ್ಕು ಮಕ್ಕಳಿದ್ದರೂ ಕೂಡ ಆಗಾಗ ಮನೆಗೆ ಬರುತ್ತಿದ್ದ ಪತ್ನಿಯ ಅಪ್ರಾಪ್ತ ವಯಸ್ಸಿನ ಸೋದರಿಯನ್ನು ಮೂರನೇ ಮದುವೆಯಾಗುವ ಆಸೆಯನ್ನು ಹೊಂದಿದ್ದ. ಇದಕ್ಕೆ ಪತ್ನಿ ಒಪ್ಪದ ಕಾರಣ ನಾದಿನಿಯನ್ನು ಅಪಹರಿಸಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಬಾಡಿಗೆ ಮನೆಯಲ್ಲಿ ಇರಿಸಿದ್ದಾನೆ. ಅಷ್ಟೇ ಅಲ್ಲದೇ ಯಾರಿಗೂ ಅನುಮಾನ ಬರಬಾರದೆಂದು ತನ್ನ ಮೂರು ವರ್ಷದ ಮಗುವನ್ನು ಕರೆದುಕೊಂಡು  ಹೋಗಿದ್ದಾನೆ.


ಇತ್ತ ಆರೋಪಿಯ ಪತ್ನಿ ತನ್ನ ಸಹೋದರಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿ ಪತ್ತೆಮಾಡಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಅಪಹರಣ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿವಾದದ ಕಿಡಿ ಹೊತ್ತಿಸಿದೆ ಡಿಸಿಎಂ ಅಶ್ವತ್ ನಾರಾಯಣ ಮಾಡಿದ ಈ ಟ್ವೀಟ್