Publish Date: Wed, 30 Oct 2019 (20:10 IST)
Updated Date: Wed, 30 Oct 2019 (20:12 IST)
ಸಂಬಂಧಿಯೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮಹಿಳೆಯೊಬ್ಬಳು ಕೊಲೆಗೀಡಾಗಿರೋ ಘಟನೆ ನಡೆದಿದೆ.
ಕಲಬುರಗಿಯ ಅಫಜಲಪುರದ ಬಡದಾಳ ರಸ್ತೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಅಫಜಲಪುರ ನಿವಾಸಿ ಸುಮಿತ್ರಾಬಾಯಿ ಗುಡ್ಡೇವಾಡಗಿ (30) ಕೊಲೆಯಾದ ಮಹಿಳೆಯಾಗಿದ್ದಾಳೆ. ದುಷ್ಕರ್ಮಿಗಳು ಅತ್ಯಾಚಾರ ನಡೆಸಿ ಸುಮಿತ್ರಾಬಾಯಿಯನ್ನು ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.
ಬಡದಾಳದ ರಸ್ತೆಯ ಹೊಲವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.