Daily Horoscope

Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಜಲ್ ಮುರಿ ಖರೀದಿಸಿದ ಅಂಗಡಿಯಾತನಿಗೆ ಕಾಡುತ್ತಿದೆ ಈಗ ಇದೊಂದು ಕೊರಗು

PM Modi
ಕೋಲ್ಕತ್ತಾ: ಪ್ರಧಾನಿ ಮೋದಿ ಜಲ್ ಮುರಿ ಖರೀದಿಸಿದ ಪಶ್ಚಿಮ ಬಂಗಾಲದ ಜಾರಗ್ರಾಮದ ಅಂಗಡಿಯಾತನಿಗೆ ಕಾಡುತ್ತಿದೆ ಈಗ ಇದೊಂದು ಕೊರಗು.

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪ್ರಧಾನಿ ಮೋದಿ ಭಾನುವಾರ ಜಾರಗ್ರಾಮದ ಪುಟ್ಟ ಚ್ಯಾಟ್ ಅಂಗಡಿಯೊಂದಕ್ಕೆ ದಿಡೀರ್ ಭೇಟಿ ನೀಡಿದ್ದರು. ಇಲ್ಲಿ ಜಲ್ ಮುರಿ ಖರೀದಿಸಿ ಸ್ಥಳೀಯರೊಂದಿಗೆ ಹಂಚಿ ತಿಂದಿದ್ದರು.

ಆ ಅಂಗಡಿಯಾತನೊಂದಿಗೂ ಆತ್ಮೀಯವಾಗಿ ಮಾತನಾಡಿಸಿದ್ದರು. ಇದಾದ ಬಳಿಕ ಈಗ ಆ ಅಂಗಡಿಯಾತನ ವ್ಯಾಪಾರವೂ ಜೋರಾಗಿದೆ. ಪ್ರಧಾನಿ ಭೇಟಿ ಕೊಟ್ಟ ಅಂಗಡಿ ಎಂದು ಸಾಕಷ್ಟು ಜನ ಇಲ್ಲಿಗೆ ಬಂದು ಜಲ್ ಮುರಿ  ಖರೀದಿ ಮಾಡುತ್ತಿದ್ದಾರೆ.

ಇದರ ನಡುವೆ ಅಂಗಡಿಯಾತನಿಗೆ ಇದೊಂದು ಕೊರಗು ಕಾಡುತ್ತಿದೆಯಂತೆ. ಪ್ರಧಾನಿ ಮೋದಿ ಬಂದಾಗ ಮಾತುಕತೆ, ಫೋಟೋ ಎಲ್ಲಾ ಆಗಿದೆ. ಆದರೆ ಸ್ವತಃ ಪ್ರಧಾನಿಯೇ ತನ್ನ ಅಂಗಡಿಗೆ ಬಂದಾಗ ಒಂದು ಹಸ್ತಾಕ್ಷರ ಪಡೆಯಲು ನೆನಪೇ ಆಗಲಿಲ್ಲ ಎಂಬ ಕೊರಗು ಆತನಿಗೆ ಕಾಡುತ್ತಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಇರಾನ್, ಅಮೆರಿಕಾ ನಡುವೆ ಕದನ ವಿರಾಮ ನಾಳೆ ದಿ ಎಂಡ್: ಮತ್ತೆ ಯುದ್ಧದ ಭೀತಿ