Daily Horoscope

Select Your Language

Notifications

webdunia
webdunia
webdunia
webdunia

ಮೋದಿ ಜಲ್ ಮುರಿ ತಿಂದ ಅಂಗಡಿ ಮಾಲಿಕನ ಅದೃಷ್ಟವೇ ಬದಲಾಯ್ತು Video

Viral video of Jhalmuri shop
Photo Credit: X
ಜಾರಗ್ರಾಮ: ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಪ್ರಚಾರದ ನಡುವೆ ದಿಡೀರ್ ಆಗಿ ಪ್ರಧಾನಿ ಮೋದಿ ಲೋಕಲ್ ಅಂಗಡಿಯೊಂದಕ್ಕೆ ತೆರಳಿ ಜಲ್ ಮುರಿ ಸೇವಿಸಿದ್ದರು. ಆ ಅಂಗಡಿಯಾತನ ಅದೃಷ್ಟವೇ ಈಗ ಬದಲಾಗಿದೆ.

ಪ್ರಧಾನಿ ಮೋದಿ ನಿನ್ನೆ ಚುನಾವಣಾ ಪ್ರಚಾರದ ವೇಳೆ ಕಾರು ನಿಲ್ಲಿಸಿ ರಸ್ತೆ ಬದಿ ಅಂಗಡಿಯೊಂದಕ್ಕೆ ತೆರಳಿ ಜಲ್ ಮುರಿ ಸೇವಿಸಿದ್ದರು. ಅಂಗಡಿಯಾತನೊಂದಿಗೆ ಸಂವಾದ ನಡೆಸಿದ್ದಲ್ಲದೆ, ಸ್ಥಳೀಯರ ಜೊತೆಗೂ ಬೆರೆತಿದ್ದರು.

ಮೋದಿಯ ಈ ನಡೆ ಎಲ್ಲ ಗಮನ ಸೆಳೆದಿತ್ತು. ಇದಾದ ಬಳಿಕ ಈಗ ಆ ಅಂಗಡಿಯಾತನ ಅದೃಷ್ಟವೇ ಬದಲಾಗಿದೆ. ದೇಶದ ಪ್ರಧಾನಿಯೇ ಒಂದು ಅಂಗಡಿಗೆ ಹೋಗಿದ್ದಾರೆಂದರೆ ಕುತೂಹಲಕ್ಕಾದರೂ ಕೆಲವರು ಅಲ್ಲಿಗೆ ಹೋಗಿಯೇ ಹೋಗುತ್ತಾರೆ.

ಇದೇ ರೀತಿ ಈಗ ಜಾರಗ್ರಾಮದ ಈ ಪುಟ್ಟ ಅಂಗಡಿಗೆ ಜನ ಸಾಗರದಂತೆ ಹರಿದುಬರುತ್ತಿದ್ದಾರೆ. ಪ್ರಧಾನಿ ಬಂದು ಹೋದ ಮೇಲೆ ಸಾಕಷ್ಟು ಜನ ಈ ಅಂಗಡಿಗೆ ಬರುತ್ತಿದ್ದಾರೆ. ಮೋದಿ ಸೇವಿಸಿದ ಅದೇ ಜಲ್ ಮುರಿಗಾಗಿ ಬೇಡಿಕೆಯಿಡುತ್ತಿದ್ದಾರೆ. ಇದರೊಂದಿಗೆ ಆ ಪುಟ್ಟ ಅಂಗಡಿಯ ವ್ಯಾಪಾರವೂ ಜೋರಾಗಿದೆ. ಇನ್ನು ಕೆಲವರು ಇಲ್ಲಿಗೆ ಬಂದು ರೀಲ್ಸ್, ವಿಡಿಯೋ ಮಾಡುತ್ತಿದ್ದಾರೆ. ಇದೇ ರೀತಿ ಗ್ರಾಹಕರೊಬ್ಬರು ಮಾಡಿರುವ ವಿಡಿಯೋ ಇಲ್ಲಿದೆ ನೋಡಿ.

pic.twitter.com/ZjSgOofHTS

 

— Yo Yo Funny Singh (@moronhumor) April 20, 2026

Share this Story:

Follow Webdunia kannada

ಮುಂದಿನ ಸುದ್ದಿ

20 ನೇ ಮಹಡಿಯಿಂದ ಹಾರಲು ಹೊರಟಿದ್ದ ಯುವತಿ: ಕೊನೆ ಕ್ಷಣದಲ್ಲಿ ಏನಾಯ್ತು, ಮೈ ಜುಮ್ ಎನಿಸುವ ವಿಡಿಯೋ