Select Your Language

Notifications

webdunia
webdunia
webdunia
webdunia

ನೌಕಾಪಡೆಯ ವಸತಿಗೃಹ ನಿರ್ಮಾಣಕ್ಕೆ ಒಂದಿಂಚೂ ಭೂಮಿ ನೀಡಲ್ಲ, ನೀವು ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಬೇಕು-ನಿತಿನ್ ಗಡ್ಕರಿ

ನೌಕಾಪಡೆಯ ವಸತಿಗೃಹ ನಿರ್ಮಾಣಕ್ಕೆ ಒಂದಿಂಚೂ ಭೂಮಿ ನೀಡಲ್ಲ, ನೀವು ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಬೇಕು-ನಿತಿನ್ ಗಡ್ಕರಿ
ಮುಂಬೈ , ಶುಕ್ರವಾರ, 12 ಜನವರಿ 2018 (16:16 IST)
ಮುಂಬೈ: ದಕ್ಷಿಣ ಮುಂಬೈನಲ್ಲಿ ನೌಕಾಪಡೆಯ ವಸತಿಗೃಹ ನಿರ್ಮಾಣಕ್ಕೆ ಒಂದು ಇಂಚೂ ಭೂಮಿಯನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರು ಹೀಗೆ ಹೇಳುವುದಕ್ಕೆ ಕಾರಣವೂ ಇದೆಯಂತೆ. ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರುವ ನೌಕಾಪಡೆಯ ಸಿಬ್ಬಂದಿಯೂ ದಕ್ಷಿಣ ಮುಂಬೈನಲ್ಲಿ ನೆಲೆಸಲು ಬಯಸುತ್ತಿದ್ದಾರೆ ಹಾಗಾಗಿ ನೌಕಪಡೆ ಸಿಬ್ಬಂದಿಗೆ ವಸತಿಗೃಹ ನಿರ್ಮಾಣಕ್ಕೆ ಒಂದು ಇಂಚೂ ಭೂಮಿಯನ್ನು ನೀಡಲಾಗುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ. 


‘ಉಗ್ರರು ನುಸುಳುತ್ತಿರುವ ಗಡಿಯಲ್ಲಿ ನೌಕಾಪಡೆಯ ಅಗತ್ಯವಿದೆ. ನೌಕಾಪಡೆ ಸಿಬ್ಬಂದಿಯವರು ಯಾಕೆ ದಕ್ಷಿಣ ಮುಂಬೈನಲ್ಲಿ ನೆಲೆಸಲು ಬಯಸುತ್ತೀರಿ? ನೌಕಾಪಡೆಯವರು ಭೂಮಿ ನೀಡುವಂತೆ ಕೇಳುತ್ತಿದ್ದಾರೆ. ಒಂದು ಇಂಚೂ ಭೂಮಿಯನ್ನು ನೀಡಲಾಗುವುದಿಲ್ಲ. ದಯವಿಟ್ಟು ನನ್ನ ಬಳಿಗೆ ಮತ್ತೆ ಬರಬೇಡಿ’ ಎಂದು ಗಡ್ಕರಿ ಖಡಾಖಂಡಿತವಾಗಿ ಹೇಳಿದ್ದಾರೆ.


ದಕ್ಷಿಣ ಮುಂಬೈನಲ್ಲಿ ಎಲ್ಲರೂ ವಸತಿಗೃಹಗಳು ಮತ್ತು ಫ್ಲಾಟ್‌ಗಳನ್ನು ನಿರ್ಮಿಸಲು ಇಚ್ಛಿಸುತ್ತಾರೆ. ನಾವು ನಿಮ್ಮನ್ನು(ನೌಕಾಪಡೆ) ಗೌರವಿಸುತ್ತೇವೆ. ಆದರೆ, ನೀವು ಪಾಕಿಸ್ತಾನದ ಗಡಿಗೆ ಹೋಗಿ ಗಸ್ತು ತಿರುಗಬೇಕು ಎಂದು ಗಡ್ಕರಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಬಿಜೆಪಿ ಒಂದು ಡ್ರಾಮಾ ಕಂಪೆನಿ’-ಸಚಿವ ರಾಮಲಿಂಗಾ ರೆಡ್ಡಿ