Publish Date: Tue, 02 Jan 2018 (08:12 IST)
Updated Date: Tue, 02 Jan 2018 (08:14 IST)
ನವದೆಹಲಿ: ಇತ್ತೀಚೆಗಷ್ಟೇ ವಿಮಾನ ಪ್ರಯಾಣ ಸಂದರ್ಭ ಎದುರಾದ ಭಾರತದ ಗ್ರೇಟ್ ವಾಲ್ ಆಫ್ ಕ್ರಿಕೆಟ್ ರಾಹುಲ್ ದ್ರಾವಿಡ್ ಜತೆ ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಹಫೀಜ್ ಈ ಫೋಟೋ ನೋಡಿ ಪಾಕ್ ಕ್ರಿಕೆಟ್ ಅಭಿಮಾನಿಗಳು ನಾವೆಲ್ಲರೂ ಹೆಮ್ಮೆ ಪಡುವ ಹಾಗೆ ಕಾಮೆಂಟ್ ಮಾಡಿದ್ದಾರೆ. ದ್ರಾವಿಡ್ ಗೆ ಪಾಕ್ ಅಭಿಮಾನಿಗಳು ಭಾರೀ ಗೌರವ ನೀಡಿದ್ದಾರೆ.
ದ್ರಾವಿಡ್ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲ, ಮನುಷ್ಯ ಕೂಡಾ, ಹಫೀಜ್ ನೀವೂ ಅವರಿಂದ ಕೆಲವು ಸಲಹೆ ಪಡೆದುಕೊಳ್ಳಿ ಎಂದು ಕೆಲವರು ಹೇಳಿದ್ದರೆ, ಭಾರತ ಕ್ರಿಕೆಟಿಗರ ಪೈಕಿ ದ್ರಾವಿಡ್ ನಮ್ಮ ಮೆಚ್ಚಿನ ಆಟಗಾರರಾಗಿದ್ದರು ಎಂದು ಅಭಿಮಾನದಿಂದಲೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ