Publish Date: Sun, 17 Dec 2017 (11:11 IST)
Updated Date: Sun, 17 Dec 2017 (11:13 IST)
ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ 2001 ರ ಕೋಲ್ಕೊತ್ತಾ ಟೆಸ್ಟ್ ಪಂದ್ಯ ನೆನಪಾಗುವುದು. ಲಕ್ಷ್ಮಣ್ ಜತೆ ಸೇರಿಕೊಂಡು ಈ ಎರಡೂ ಜೋಡಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ರೀತಿಗೆ ಇಡೀ ವಿಶ್ವವೇ ಬೆರಗಾಗಿತ್ತು.
ಆದರೆ ಅಂತಹದ್ದೊಂದು ಇನಿಂಗ್ಸ್ ಕಟ್ಟಲು ನೆರವಾಗಿದ್ದು ಸ್ಟೀವ್ ವಾ ಸ್ಲೆಡ್ಜಿಂಗ್ ಎಂದು ರಾಹುಲ್ ದ್ರಾವಿಡ್ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಾವು ಮೈದಾನಕ್ಕಿಳಿದಾಗಲೇ ವಾ ತಮ್ಮನ್ನು ಕೆಣಕಿದ್ದಕ್ಕೇ ಛಲ ಹೊತ್ತು ಆಡಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಫಾಲೋ ಆನ್ ಗೆ ತುತ್ತಾಗಿದ್ದ ಭಾರತ ತಂಡವನ್ನು ಕೊನೆಗೆ ದ್ರಾವಿಡ್-ಲಕ್ಷ್ಮಣ್ ಜೋಡಿ ಐತಿಹಾಸಿಕ ಜಯದತ್ತ ಕೊಂಡೊಯ್ದಿದ್ದರು.
ಇದೇ ಕಾರಣಕ್ಕೆ ಇಂದಿಗೂ ಆಸಿಸ್ ತಂಡ ಭಾರತದ ಮೇಲೆ ಫಾಲೋ ಆನ್ ಹೇರಲು ಹಿಂದು ಮುಂದು ನೋಡುತ್ತದೆ. ಅಷ್ಟಕ್ಕೂ ಅವತ್ತು ಸ್ಟೀವ್ ಏನು ಹೇಳಿದ್ದರು? ‘ಕೆಲವು ಪಂದ್ಯಗಳಿಂದ ನಾನು ಚೆನ್ನಾಗಿ ಆಡಿರಲಿಲ್ಲ. ಹೀಗಾಗಿ ನಂ.6 ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದೆ. ಆವತ್ತು ಭಾರತ ತಂಡ ಹೀನಾಯ ಸ್ಥಿತಿಯಲ್ಲಿತ್ತು. ಆಗ ನಾನು ಬ್ಯಾಟಿಂಗ್ ಗೆಂದು ಮೈದಾನಕ್ಕಿಳಿದಾಗ ಅಲ್ಲಿದ್ದ ಸ್ಟೀವ್ ನನ್ನ ಬಳಿ ಬಂದು ಈ ಪಂದ್ಯದಲ್ಲಿ ನಂ.6 ನೇ ಸ್ಥಾನ. ಮುಂದಿನ ಪಂದ್ಯದಲ್ಲಿ ಎಷ್ಟು? ನಂ. 12 ? ಎಂದು ಕೆಣಕಿದರು.
ಆಗಲೇ ನಾನು ನಿರ್ಧರಿಸಿದ್ದೆ ಚೆನ್ನಾಗಿ ಆಡಬೇಕೆಂದು. ಆವತ್ತು ನಾನು ಪ್ರತೀ ಬಾಲ್ ಗೆ ಒಂದು ಯೋಜನೆ ರೂಪಿಸಿ ಆಡಿದ್ದೆ. ಒಂದು ಬಾರಿ ಒಂದು ಬಾಲ್ ಎಂಬ ನಿಯಮದಂತೆ ಆಡಿದೆ. ಯಶಸ್ಸೂ ಕಂಡೆ’ ಎಂದು ದ್ರಾವಿಡ್ ನೆನಪಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ