Publish Date: Fri, 12 Jan 2018 (15:44 IST)
Updated Date: Fri, 12 Jan 2018 (15:48 IST)
ಮಂಗಳೂರು : ‘ಬಿಜೆಪಿ ಒಂದು ಡ್ರಾಮಾ ಕಂಪೆನಿ’ ಎಂದು ಮಂಗಳೂರಿನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ.
‘ಈ ಕಂಪೆನಿಗೆ ಮೋದಿ ಮಾಲೀಕ, ಅಮಿತ್ ಶಾ ಮ್ಯಾನೇಜರ್, ಪರಿಕ್ಕರ್, ಯಡಿಯೂರಪ್ಪ ಈ ಕಂಪೆನಿಯ ಪಾತ್ರಧಾರಿಗಳು’ ಎಂದು ಹೇಳಿದ್ದು, ‘ಬಿಜೆಪಿ ನಾಯಕರಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದರೆ ಕಾಂಗ್ರೆಸ್ ಏನಿದ್ದರೂ ರೈತರ ಪರವಾಗಿದೆ. ಕರ್ನಾಟಕಕ್ಕೆ ಅಮಿತ್ ಶಾ ಅವರು ವ್ಯಾಪಾರಕ್ಕಾಗಿ ಬಂದಿದ್ದಾರೆ. ಈಸ್ಟ್ ಇಂಡಿಯಾ ಕಂಪೆನಿ ಕೂಡ ಕೊಳ್ಳೆಹೊಡೆದಿತ್ತು. ಹಾಗೆ ಇವರು ಹಣ ನೀಡಿ ಮತದಾರರನ್ನು ಖರೀದಿಸುವ ಭ್ರಮೆಯಲ್ಲಿದ್ದಾರೆ. ಆದರೆ ಕರ್ನಾಟಕದ ಮತದಾರರು ಸ್ವಾಭಿಮಾನಿಗಳು. ಬಿಜೆಪಿ ನಾಟಕ ಇಲ್ಲಿ ನಡೆಯುವುದಿಲ್ಲ’ ಎಂದು ಮಂಗಳೂರಿನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ