Publish Date: Fri, 11 Sep 2020 (07:44 IST)
Updated Date: Fri, 11 Sep 2020 (07:45 IST)
ಮಧುರೈ : 14 ವರ್ಷದ ಬಾಲಕಿಯ ಮೇಲೆ ಆಕೆಯ 17 ವರ್ಷದ ಪ್ರಿಯಕರ ಮತ್ತು ಆತನ ತಾಯಿ ಸೇರಿ ಮಾನಭಂಗ ಎಸಗಿದ ಘಟನೆ ತಮಿಳುನಾಡಿನ ಮಧುರೈ ನ ಸಿಲೈಮಾನ್ ನಲ್ಲಿ ನಡೆದಿದೆ.
ಸಿಲೈಮಾನ್ ನ ಬಾಲಕ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆತ ಪ್ರಿಯತಮೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ. ಬಳಿಕ ಆಕೆ ಇದನ್ನು ವಿರೋಧಿಸಿದಾಗ ಆತನ ತಾಯಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾಳೆ.
ಬಳಿಕ ಮನೆಗೆ ಬಂದ ಬಾಲಕಿ ತನ್ನ ಪೋಷಕರ ಮುಂದೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.