Publish Date: Fri, 11 Sep 2020 (07:41 IST)
Updated Date: Fri, 11 Sep 2020 (07:43 IST)
ಲಾಹೋರ್ : ಕಾರು ಹಾಳಾಗಿ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಮಹಿಳೆಯ ಮೇಲೆ 12 ಮಂದಿ ಪುರುಷರು ಮಾನಭಂಗ ಎಸಗಿದ ಘಟನೆ ಪಾಕಿಸ್ತಾನದ ಲಾಹೋರ್-ಸಿಯಾಲ್ ಕೋಟ್ ನ ಮಾರ್ಗವೊಂದರಲ್ಲಿ ನಡೆದಿದೆ.
ಬುಧವಾರ ರಾತ್ರಿ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳ ಜೊತೆ ಕಾರಿನಲ್ಲಿ ನಿರ್ಜನ ಮಾರ್ಗವೊಂದರಲ್ಲಿ ಬರುತ್ತಿದ್ದಾಗ ಕಾರು ಕೆಟ್ಟು ನಿಂತಿದೆ. ಆಕೆ ಸಹಾಯಕ್ಕಾಗಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಸಶಸ್ತ್ರದಾರಿ 12 ಮಂದಿ ಪುರುಷರು ಮಹಿಳೆ ಹಾಗೂ ಮಕ್ಕಳಿಗೆ ಗನ್ ಪಾಯಿಂಟ್ ತೋರಿಸಿ ಹೆದರಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ಬಗ್ಗೆ ಲಾಹೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು 12 ಮಂದಿ ಪುರುಷರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.