Select Your Language

Notifications

webdunia
webdunia
webdunia
webdunia

ಶವದ ಮೇಲೆ ರೇಪ್ ಮಾಡಿದ ವಿಕೃತ ಕಾಮಿ: ಶಾಕಿಂಗ್ ವಿಡಿಯೋ ವೈರಲ್

Viral  video

Krishnaveni K

ಮಧ್ಯಪ್ರದೇಶ , ಶನಿವಾರ, 11 ಅಕ್ಟೋಬರ್ 2025 (11:37 IST)
ಮಧ್ಯಪ್ರದೇಶ: ಇಲ್ಲಿನ ಆಸ್ಪತ್ರೆಯಲ್ಲಿ ಶವದ ಮೇಲೆಯೇ ಅತ್ಯಾಚಾರವೆಸಗಿ ಕಾಮುಕ ಯುವಕನೊಬ್ಬ ವಿಕೃತಿ ಮೆರೆದಿದ್ದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೃಶದ ಬುರ್ಹಾನ್ಪುರ ಜಿಲ್ಲೆಯ ಆರೋಗ್ಯ ಕೇಂದ್ರವೊಂದರಲ್ಲಿ ಘಟನೆ ನಡೆದಿದೆ. ಸ್ಟ್ರೆಚರ್ ಮೇಲೆ ಮಲಗಿಸಲಾಗಿದ್ದ ಮಹಿಳೆಯ ಮೃತದೇಹವನ್ನು ಎಳೆದುಕೊಂಡು ಹೋಗುವ ಕಾಮುಕ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾನೆ.

ಈ ಘಟನೆಯ ಸಿಸಿಟಿವಿ ದೃಶ್ಯವನ್ನಾಧರಿಸಿ ವೈದ್ಯಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕಾಮುಕನನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶವಾಗಾರದ ಬಳಿ ಇರಿಸಲಾಗಿತ್ತು.

ಮೂಲಗಳ ಪ್ರಕಾರ ಕಳೆದ ವರ್ಷವೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ  ಮೊನ್ನೆಯಷ್ಟೇ ದೂರು ನೀಡಲಾಗಿದೆ. ಆರೋಪಿಯನ್ನು ತನಿಖೆಗೊಳಪಡಿಸಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೊಬೆಲ್ ಪ್ರಶಸ್ತಿ ತನಗೆ ಸಿಗಲಿಲ್ಲ ಎಂದು ಟ್ರಂಪ್ ಗೆ ಎಷ್ಟು ಹೊಟ್ಟೆ ಉರಿ ನೋಡಿ