ಮುಂಬೈ: ವಿವಾದಾತ್ಮಕ ಸುದ್ದಿಗಳಿಂದಲೇ ಸುದ್ದಿಯಾಗುವ ಕ್ರಿಕೆಟಿಗ ಪೃಥ್ವಿ ಶಾ ಈಗ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಔಟಾದ ಸಿಟ್ಟಿನಲ್ಲಿ ಬೌಲರ್ ಗೆ ಹೊಡೆಯಲು ಹೋಗಿರುವ ವಿಡಿಯೋ ಈಗ ವೈರಲ್ ಆಗಿದೆ.
ಮಹಾರಾಷ್ಟ್ರ ಮತ್ತು ಮುಂಬೈ ನಡುವೆ ರಣಜಿ ಅಭ್ಯಾಸ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದ ಪೃಥ್ವಿ ಶಾ 181 ರನ್ ಗಳ ದೊಡ್ಡಇನಿಂಗ್ಸ್ ಆಡಿದ್ದರು. ಆದರೆ ಈ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಪ್ರಮುಖ ವಿಕೆಟ್ ಕಿತ್ತ ಸಂಭ್ರಮದಲ್ಲಿ ಮುಶೀರ್ ಖಾನ್ ಭರ್ಜರಿ ಸೆಲೆಬ್ರೇಷನ್ ಮಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಪೃಥ್ವಿ ಶಾ ಮೊದಲು ವಾಕ್ಸಮರ ನಡೆಸಿದ್ದಾರೆ. ಬಳಿಕ ಸಿಟ್ಟಿನಲ್ಲಿ ಬ್ಯಾಟ್ ನಿಂದ ಹೊಡೆಯಲೇ ಹೋಗಿದ್ದಾರೆ.
ಬಳಿಕ ಅಂಪಾಯರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಇದರ ನಡುವೆ ಪೃಥ್ವಿ ಶಾ ಜೊತೆ ಮುಂಬೈನ ಇನ್ನೊಬ್ಬ ಆಟಗಾರನೂ ವಾಕ್ಸಮರಕ್ಕೆ ಇಳಿದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.