Select Your Language

Notifications

webdunia
webdunia
webdunia
webdunia

ಮಹಿಳಾ ವಿಶ್ವಕಪ್‌ ಕ್ರಿಕೆಟ್‌: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್‌ ಆಟಗಾರ್ತಿಗೆ ಮತ್ತೊಂದು ಶಾಕ್‌

Sindra Amin

Sampriya

ಕೊಲಂಬೊ , ಸೋಮವಾರ, 6 ಅಕ್ಟೋಬರ್ 2025 (20:03 IST)
Photo Credit X
ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ತಂಡದ ಆಟಗಾರ್ತಿಗೆ ಐಸಿಸಿ ಶಾಕ್‌ ನೀಡಿದೆ.

ನೀತಿಸಂಹಿತೆ ಉಲ್ಲಂಘಿಸಿದ ಕಾರಣ ಪಾಕಿಸ್ತಾನ ತಂಡದ ಬ್ಯಾಟರ್ ಸಿದ್ರಾ ಅಮಿನ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್‌ ಪಾಯಿಂಟ್ ಸಹ ಸೇರ್ಪಡೆ ಮಾಡಲಾಗಿದೆ.

ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಸಿದ್ರಾ ಏಕಾಂಗಿಯಾಗಿ ಹೋರಾಡಿ 81 ರನ್ ಗಳಿಸಿದ್ದರು. ಆದರೆ, ಪಂದ್ಯವನ್ನು ಪಾಕಿಸ್ತಾನ 88 ರನ್‌ಗಳಿಂದ ಸೋತಿತ್ತು.

ಗುರಿ ಬೆನ್ನಟ್ಟುವ ವೇಳೆ, 40ನೇ ಓವರಿನಲ್ಲಿ ಸಿದ್ರಾ ಅವರು ಸ್ನೇಹ ರಾಣಾ ಬೌಲಿಂಗ್‌ನಲ್ಲಿ ಔಟ್ ಆಗಿದ್ದರು. ಆಗ ಅವರು ಹತಾಶೆಯಿಂದ ಬ್ಯಾಟನ್ನು ಪಿಚ್‌ಗೆ ಜೋರಾಗಿ ಹೊಡೆದು, ಕೆಂಗಣ್ಣಿಗೆ ಗುರಿಯಾಗಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

Video: ಪುರುಷರ ತಂಡದಂತೇ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿದ್ರು ಮೂತಿಯೂ ನೋಡದೇ ಬಂದ್ರು