ಬೆಂಗಳೂರು: ಬಿಗ್ ಬಾಸ್ ಸೀಸನ್ 11ರಲ್ಲಿ ಲಾಯರ್ ಜಗದೀಶ್ ಗೆ ಹಲ್ಲೆ ಮಾಡಿದ ವಿಚಾರದಲ್ಲಿ ಅರ್ಧದಲ್ಲೇ ಹೊರಬಂದಿದ್ದ ರಂಜಿತ್ ವಿರುದ್ದ ಇದೀಗ ದೂರು ದಾಖಲಾಗಿದೆ. ರಂಜಿತ್ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಬಾವ ಜಗದೀಶ್ ಅವರು ದೂರು ನೀಡಿದ್ದು ಪೊಲೀಸರು ಎನ್‌ಸಿಆರ್ (ಎನ್‌ಸಿಆರ್) ದಾಖಲಿಸಿದ್ದಾರೆ.
ಏನಿದು ಪ್ರಕರಣ: 2018 ರಿಂದ ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ಕುಟುಂಬದ ಜತೆ 2025 ರಿಂದ ರಂಜಿತ್ ಕೂಡಾ ಬಂದು ವಾಸವಾಗುತ್ತಾರೆ. ಇದೀಗ ಈ ಮನೆ ವಿಚಾರವಾಗಿ ಅಕ್ಕ ತಮ್ಮನ ನಡುವೆ ಜಗಳ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.
ಅದರಲ್ಲಿ ರಂಜಿತ್ ಅಕ್ಕಾ ಹಾಗೂ ರಂಜಿತ್ ಪತ್ನಿ ವಿರುದ್ಧ ಆರೋಪ ಮಾಡುತ್ತಿರುವುದನ್ನು ಕಾಣಬಹುದು. ಇದರಿಂದ ಕೋಪಗೊಂಡ ರಂಜಿತ್, ಅಕ್ಕನ ಮೇಲೆ ಗರಂ ಆಗಿದ್ದಾನೆ. ಮನೆ ಬಿಟ್ಟು ಹೋಗದೆ ಈ ಮನೆ ನನ್ನದು ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ದೂರು ನೀಡಿದ್ದಾರೆ. ದೂರಿಗೆ ಸಾಕ್ಷ್ಯವಾಗಿ ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೋವನ್ನು ನೀಡಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ರಂಜಿತ್ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೊಮ್ಮೆ ಗಲಾಟೆ ಮಾಡಿಕೊಳ್ಳಬಾರದು ಎಂದು ಹೇಳಿ ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ